ಜಗಳೂರು : ಸಾಮಾಜಿಕ ಕಾರ್ಯಗಳ ನಡುವೆಯೂ ಬೃಹತ್ ನಗರಗಳಲ್ಲಿ ದೊರೆಯುವಂತಹ ಐಷಾರಾಮಿ ಹೋಟೆಲ್ ಗಳನ್ನು ಹಿಂದುಳಿದ ತಾಲೂಕಿನಲ್ಲಿ ನಿರ್ಮಿಸಿರುವುದು ತಾಲೂಕಿನ ಸೌಭಾಗ್ಯವಾಗಿದೆ ಎಂದು ಚಲನಚಿತ್ರ ನಟ ಪ್ರೇಮ್ ಹೇಳಿದರು.
ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ನೂತನ ಕೆಎ 17 ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರ್ಕತ್ ಅಲಿ ಕುಟುಂಬ ಕ್ಷೇತ್ರದಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ,ಹಸಿದವರಿಗೆ ಅನ್ನನೀಡುವ ಸಾಮಾಜಿಕ ಕಾರ್ಯಗಳ ನಡುವೆಯೂ ಹೆಚ್ಚಾಗಲಿ,ಕುಟುಂಬಕ್ಕೆ ಶ್ರೇಯಸ್ಸು ಲಭಿಸಲಿ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಅವರು ಸಹೃದಯಿ,ಜನಾನುರಾಗಿಯಾಗಿ,ಅಪಾರ ಜ್ಞಾನ ಹೊಂದಿದ್ದಾರೆ.ಎಲ್ಲರ ಸಹಕಾರದಿಂದ ಜಗಳೂರು ಸಮೃದ್ದ ನಾಡಾಗಲಿ ಎಂದು ಹಾರೈಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ತಾಲ್ಲೂಕಿನಲ್ಲಿ ಸಾಕಷ್ಟು ಹಣವಂತರಿದ್ದಾರೆ ಆದರೆ ಹೃದಯ ಶ್ರೀಮಂತಿಕೆ ಬೇಕಿದೆ.ಬರ್ಕತ್ ಅಲಿ,ನಬಿ ಸಹೋದರರು ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಹೋಗಿದ್ದರೂ ನಂತರ ಜನ್ಮಭೂಮಿಗೆ ಮರಳಿ ಜೈ ಭಾರತ್ ಟ್ರಸ್ಟ್ ಮೂಲಕ ಆರೋಗ್ಯ ಸೇವೆ,ದಾನಧರ್ಮದ ಸಮಾಜಮುಖಿ ಕಾರ್ಯಗಳೊಂದಿಗೆ ದಾಪುಗಾಲು ಇಟ್ಟಿದ್ದಾರೆ.ಕ್ಷೇತ್ರ ವ್ಯಾಪಿ ಧರ್ಮಾತೀತ,ಜಾತ್ಯಾತೀತವಾಗಿ ವಿಶ್ವಾಸ ಗಳಿಸುವ ಮೂಲಕ ಜನರ ಮನಸ್ಸು ಗೆಲ್ಲುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾವರ್ಗದ ಬಡಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಗ್ಯಾರಂಟಿ ರಾಮಯ್ಯ ರಾಗಿ ಜನಮಾನಸದಲ್ಲಿ ಉಳಿದಿದ್ದಾರೆ.ಕ್ಷೇತ್ರದಲ್ಲಿ ನೀರಾವರಿ ಯೋಜನೆ,ಮೂಲಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ದಿಗೆ ಆದ್ಯತೆ ನೀಡುತ್ತಿರುವೆ.ಅಭಿವೃದ್ದಿ ಕಾಮಗಾರಿಗಳಿಗೆ ಪಕ್ಷಾತೀತ ಸಹಕಾರ ನೀಡಬೇಕು ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಕಂಬದ ರಂಗಯ್ಯ,ದಿಯಾಹೆಗ್ಡೆ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಇದೇ ವೇಳೆ ನಟಿ ಸಂಜನಾವರ್ಧನ್,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಎಚ್.ಪಿ.ರಾಜೇಶ್, ಸಮರ್ಥ್,ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜೈಭಾರತ್ ಟ್ರಸ್ಟ್ ನ ಕಾರ್ಯದರ್ಶಿ ನಬಿವುಲ್ಲಾ,ಬರ್ಕತ್ ಅಲಿ,ಸೇರಿದಂತೆ ತಾಲ್ಲೂಕಿನ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.
