ಹರಿಹರ : ವೈದಿಕ ಪರಂಪರೆಯ ಕೆಲವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ಮೂಢ ನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಾ ಅನಾವಶ್ಯಕ ಆರ್ಥಿಕ ಭಾರವನ್ನು ಹೇರುತ್ತಿರುವ ಬಗ್ಗೆ ಸಮುದಾಯ ಎಚ್ಚರಗೊಳ್ಳಬೇಕೆಂದು ಬಸವ ಸಂಸ್ಕøತಿ ಅಭಿಯಾನದ ದಾವಣಗೆರೆ ಜಿಲ್ಲಾ ಸಂಚಾಲಕ ಆವರಗೆರೆ ರುದ್ರಮುನಿ ಹೇಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆರಂಭಿಸಿರುವ ಬಸವ ಸಂಸ್ಕøತಿ ಅಭಿಯಾನ ನಗರಕ್ಕೆ ಆಗಮಿಸಿದಾಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ, ಅಧ್ಯಾತ್ಮ ಮತ್ತು ಮೂಢ ನಂಬಿಕೆಗಳ ನಡುವಿನ ಅಂತರದೊಡ್ಡದಿದೆ, ಆದರೆ ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರವನ್ನು ತೊಡಗಿಸಲಾಗಿದೆ. ಧರ್ಮವನ್ನು ಪಾಲನೆ ಮಾಡಲು ಯಾವುದೆ ಹಣಖರ್ಚು ಮಾಡಬೇಕಿಲ್ಲ, ಆದರೆ ಹಣವನ್ನು ಗಳಿಸುವ ಧಾವಂತದಲ್ಲಿ ಕೆಲವು ವೈದಿಕ ಪರಂಪರೆಯ ವ್ಯಕ್ತಿಗಳು ಜನ ಸಾಮಾನ್ಯರಿಗೆ ಆರ್ಥಿಕ ಭಾರವನ್ನು ಹೇರುತ್ತಿರುವುದು ಖಂಡನೀಯ ಎಂದರು.
ವಿಶ್ವಗುರು, ಜಗತ್ತಿನ ಜ್ಯೋತಿಎಂದು ಕರೆಯಲ್ಪಡುವ ಬಸವಣ್ಣನವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ನಡೆಯುತ್ತಿದ್ದ ಜನ ಸಾಮಾನ್ಯರ ಶೋಷಣೆ ವಿರುದ್ಧ ದೊಡ್ಡಧ್ವನಿ ಎತ್ತಿದರು, ಆಗ ಆಗಿನ ವೈದಿಕ ಪರಂಪರೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೆ ಹೊಟ್ಟೆ ನೋವು ಆರಂಭವಾಯಿತೆಂದರು.
ಆಧುನಿಕ ಯುಗವಾದರೂ ಈಗಲೂ ತಮ್ಮ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಸಂವರ್ಧನೆಗೆ ಗಮನ ನೀಡಲಾಗದ ಆರ್ಥಿಕ ದುಸ್ಥಿತಿಯಲ್ಲಿರುವ ಬಡಜನರು ಸಾಲ ಮಾಡಿ ಧರ್ಮದ ಹೆಸರಲ್ಲಿ ಆಚರಣೆಗಳನ್ನು ಪಾಲನೆ ಮಾಡುತ್ತಿರುವುದು ವಿಪರ್ಯಾಸ ಎಂದರು.
ಎಲ್ಲಾ ಜಾತಿ, ಧರ್ಮಗಳಲ್ಲಿರುವ ಯುವಜನರು, ಪ್ರಜ್ಞಾವಂತರು, ವಿದ್ಯಾವಂತರು ತಮ್ಮ ಕುಟುಂಬ, ಸುತ್ತ, ಮುತ್ತಲಿನ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು.ಮೂಢ ನಂಬಿಕೆ ಮತ್ತು ಧರ್ಮದ ನಡುವಿನ ಅಂತರವನ್ನು ತಿಳಿಯಪಡಿಸಬೇಕೆಂದರು.
Read also : ದಾವಣಗೆರೆ : ನವೋದ್ಯಮ ಪ್ರಾರಂಭಿಸಲು ಉತ್ತೇಜನ ನೀಡಲು ಅರ್ಜಿ ಆಹ್ವಾನ
ಮಲೆಬೆನ್ನೂರು ಬಸವ ಮಂಟಪದ ಅಧ್ಯಕ್ಷರಾದ ನಾರೇಶಪ್ಪ ಮಾತನಾಡಿ, ಅರಿವನ್ನೆ ಗುರುವನ್ನಾಗಿ, ಆಚಾರವನ್ನೆ ಲಿಂಗವನ್ನಾಗಿ, ಪ್ರಮಾಣಿಕತೆ, ದಯೆ, ಕಾಯಕ ಶ್ರದ್ಧೆ, ಏಕದೇವ ನಿಷ್ಠೆ, ದಾಸೋಗ ಪ್ರಜ್ಞೆ, ಸತ್ಯ, ನೀತಿಯೆ ಬಸವ ಪಥವಾಗಿದೆ. ಈ ಕುರಿತುಜಾಗೃತಿ ಮೂಡಿಸಲುಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1 ರಿಂದ ಬಸವನ ಬಾಗೇವಾಡಿಯಿಂದ ಈ ಅಭಿಯಾನವನು ಆರಂಭಿಸಿದ್ದು ಅ.5 ರಂದು ಬೆಂಗಳೂರಿನಲ್ಲಿ ಸಮಾರೋಪದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಮಾತನಾಡಿ, ಕುಲ ಕಸಬನ್ನು ಆಧರಿಸಿ ಜಾತೀಯತೆಯನ್ನು ಆಚರಿಸುತ್ತಿದ್ದವರನ್ನು ವಿರೋಧಿಸಿದ ಬಸವಣ್ಣನವರ ತತ್ವಗಳು ಎಲ್ಲಾ ಧರ್ಮಿಯರಿಗೆ ಮಾದರಿಯಾಗಿವೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಮಾನೆ ಮಾತನಾಡಿ, ಆಗಿನ ಕಾಲದ ಹತ್ತಾರು ಶೋಷಿತ ಸಮುದಾದವರಿಗೆ ಲಿಂಗಧಾರಣೆ ಮಾಡಿಸಿ ವೈಚಾರಿಕ ಕ್ರಾಂತಿಯನ್ನು ಸೃಷ್ಟಿಸಿದ ಬಸವಣ್ಣನವರ ತತ್ವ 800 ವರ್ಷಗಳ ನಂತರವೂ ಪ್ರಸ್ತುತವಾಗಿದೆ ಎಂದರು.
ಹನಗವಾಡಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರಾವತಿ ಪರಮೇಶ್ವರಪ್ಪ, ಕರವೇ ನಗರಘಟಕ ಅಧ್ಯಕ್ಷ ಪ್ರೀತಮ್ ಬಾಬು, ಕಡ್ಲೆಬಾಳು ಪ್ರಕಾಶ್, ವಿ.ಟಿ.ಮಂಜುನಾಥ್, ಕುಂದೂರು ಬಸವರಾಜ್, ಮಲೆಬೆನ್ನೂರು ಬಸವರಾಜ್, ಕಲಕೋಟಿಶಿವಬಸಮ್ಮ, ಕುಂಬಳೂರು ಸದಾಶಿವ, ಮಲೆಬೆನ್ನೂರು ಬಸವರಾಜ್ ಇತರರು ಉಪಸ್ಥಿತರಿದ್ದರು.