ದಾವಣಗೆರೆ (Davanagere): ಆಟೋದಲ್ಲಿ ಕಳೆದುಕೊಂಡಿದ್ದ 1.50 ಲಕ್ಷ ಮೌಲ್ಯದ ಸ್ವತ್ತು ಪತ್ತೆ ಮಾಡಿ ವಾರಸುದಾರರಿಗೆ ಬಸವನಗರ ಠಾಣೆ ಪೊಲೀಸರು ಒಪ್ಪಿಸಿದ್ದಾರೆ.
ನ.20 ರಂದು ಜಗಳೂರು ತಾಲ್ಲೂಕಿನ ಸಿದ್ದಯ್ಯ ಕೋಟೆ ಗ್ರಾಮದ ಅಂಜುಬಾನು ಗಂಡ ಪಿಂಜಾರ್ ಮೌಲಾಸಾಬ ಅವರು, ದಾವಣಗೆರೆಗೆ ಬಂದು ಆಟೋದಲ್ಲಿ ಇಳಿಯುವಾಗ ತಮ್ಮ ಬೆಳ್ಳಿ ಮತ್ತು ಬಂಗಾರದ ಆಭರಣ ಹಣ ಹಾಗೂ ಮೊಬೈಲ್ ಪೋನ್ ನ್ನು ಬಿಟ್ಟು ಕಳೆದುಕೊಂಡಿದ್ದು. ಈ ಸಂಬಂಧ ಬಸವನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಮಾಲು ಪತ್ತೆ ಮಾಡಲು ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ ಹಾಗೂ ನಗರ ಉಪವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮರ‍್ಗರ‍್ಶನದಲ್ಲಿ ಬಸವನಗರ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ಲಕ್ಷ್ಮಣನಾಯ್ಕ ರವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು, ಕಳೆದು ಹೋದ ಮಾಲಿನ ಪತ್ತೆ ಕರ‍್ಯವನ್ನು ಕೈಗೊಂಡಿದ್ದು, ಅಂಜುಬಾನು ರವರು ಪ್ರಯಾಣಿಸಿದ ಆಟೋವನ್ನು ದಾವಣಗೆರೆ ಪೋಲೀಸ್ ಕಮಾಂಡ ಸೆಂಟರ್ ಸಿಬ್ಬಂದಿಯವರ ಸಹಾಯದಿಂದ KA-17 D 7633 ನಂಬರಿನ ಆಟೋ ಮತ್ತು ಚಾಲಕ ಮಹಮ್ಮದ್ ಹುಸೇನ್ ಶೇಕ್ ಎಸ್‍ಎಸ್‍ಎಂ ನಗರ ದಾವಣಗೆರೆ ಈತನನ್ನು ನ.21 ರಂದು ಪತ್ತೆ ಮಾಡಿ ಅಂಜುಬಾನು ಕಳೆದುಕೊಂಡಿದ್ದ ಸುಮಾರು 20 ಗ್ರಾಂ ಬಂಗಾರ ಹಾಗೂ ಇತರೆ ಬೆಳ್ಳಿಯ ಆಭರಣ, 10,000/- ನಗದು ಹಣ ಹಾಗೂ ಮೊಬೈಲ್ ಪೋನ್ ಒಟ್ಟು 1,50,000/- ರೂ ಮೌಲ್ಯದ ಸ್ವತ್ತನ್ನು ವಾರಸುದಾರಿಗೆ ಬಸವನಗರ ಪೋಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
ಪತ್ತೆ ಕರ‍್ಯದಲ್ಲಿ ಯಶಸ್ವಿಯಾದ ಬಸವನಗರ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ಲಕ್ಷ್ಮಣನಾಯ್ಕ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಫಕ್ರದ್ದೀನ್ ಅಲಿ, ಪರ‍್ವಾಚಾರಿ, ಸುರೇಶ್ ಟಿ, ವಿಶಾಲಾಕ್ಷಿ ಹಾಗೂ ಪೋಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯರವರ ತಂಡಕ್ಕೆ ಪೋಲೀಸ್ ಅಧೀಕ್ಷಕರರಾದ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.
Read also : ಸವಾಲುಗಳ ಮೀರಿ ಜ್ಞಾನ, ಕೌಶಲ್ಯ ಪಡೆದು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ : ಎಸ್.ಆರ್. ಶಂಕಪಾಲ್