ದಾವಣಗೆರೆ (Davanagere): ಕರ್ನಾಟಕದಲ್ಲಿ ಬಹುಮುಖ್ಯವಾಗಿ ಚರ್ಚಿತವಾಗುತ್ತಿರುವುದು ಜಾತಿಗಣತಿ ವಿಚಾರ. ಇದು ಜಾತಿಗಣತಿ ಅಲ್ಲ. ಎಲ್ಲಾ ಜಾತಿ, ಧರ್ಮದವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದ್ರೆ, ಪರ- ವಿರೋಧ ಚರ್ಚೆ ಆಗುತ್ತಿದೆ. ಆದ್ರೆ ಬೇಡಿಕೆ ಇಡಬೇಕಾಗಿರುವುದು ಶೋಷಿತರೇ ಹೊರತು ಬಲಾಢ್ಯರಲ್ಲ. ಆದ್ದರಿಂದ ಜಾತಿಗಣತಿ ವರದಿ ಜಾರಿಗೆ ನಾವೆಲ್ಲರೂ ಸೇರಿ ಸಂಘಟಿತರಾಗಿ ಹೋರಾಡೋಣ, ಹಕ್ಕು ಪಡೆಯೋಣ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದ್ದಾರೆ.
Read also : ಪಂಚಮಸಾಲಿ ಸಮಾಜದ ಪ್ರತ್ಯೇಕ ಸಭೆಗಳು ರದ್ದು : ಮಾಜಿ ಶಾಸಕ ಎಚ್.ಎಸ್.ಶಿವಶಂಕರ್
ಇಷ್ಟು ವರ್ಷ ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪರು ಗೆಲ್ಲಲು ಕಾರಣವೇ ಅಹಿಂದ ಮತಗಳು. ಜಾತಿ ರಾಜಕಾರಣಕ್ಕೆ ಬಂದರೆ ಅವರು ಮೊರೆ ಹೋಗಿದ್ದು ಹಿಂದುಳಿದ ವರ್ಗದ ನಾಯಕನಿಗೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 85 ರಷ್ಟಿದೆ. ಮತ ಹಾಕಿದ್ದರಿಂದ ಆಗರ್ಭ ಶ್ರೀಮಂತರಾಗಿರುವುದು. ಆದ್ರೆ ಅವರ ಶ್ರೀಮಂತಿಕೆಯಿಂದ ಜನರಿಗೆ ಒಳ್ಳೆಯದಾಗಿಲ್ಲ. ಆ ಕ್ಷೇತ್ರಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಆರ್ಥಿಕ, ಶೈಕ್ಷಣಿಕವಾಗಿ ಮುಂದುವರಿದ ಸಮುದಾಯಗಳಿಗೆ ಶಿಕ್ಷಣ ಸಿಕ್ಕಿರುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಭ್ರಾತೃತ್ವ ಪ್ರತಿಪಾದನೆ ಮಾಡಿದರು. ಶೋಷಣೆ, ಅಸ್ಪೃಶ್ಯತೆ ವಿರುದ್ದ ಹೋರಾಡಿದರು. ಸಹೋದರರಂತೆ ಎಲ್ಲಾ ವರ್ಗದವರನ್ನು ಕಾಣಬೇಕು. ರಾಜಕೀಯವಾಗಿ ಮುನ್ನೆಲೆಗೆ ತರಬೇಕೆಂಬ ಅಂಬೇಡ್ಕರ್ ಕನಸು ಈಡೇರಲೇ ಇಲ್ಲ. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಮೇಲ್ವರ್ಗದವರು ನಿಂತಿದ್ದಾರೆ. ನಮ್ಮ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಡಿಕೆ ಇಡುತ್ತಾರೆ. ಪ್ರಬಲ ವರ್ಗದವರು ಬೇಡಿಕೆ ಇಡುತ್ತಿದ್ದಾರೆಯೇ ವಿನಾಃ ಶೋಷಿತರಲ್ಲ ಎಂದು ಪ್ರತಿಪಾದಿಸಿದ್ದಾರೆ.
ವ್ಯಾಪಾರೋದ್ಯಮಿಗಳು ಸೃಷ್ಟಿ ಮಾಡಿರುವ ಆಸ್ತಿ ಕಾಪಾಡಿಕೊಳ್ಳಲು ಅಧಿಕಾರ ಬೇಕು. ಹತ್ತು ಪಟ್ಟು ಬೆಳೆಯಬೇಕು ಎಂಬ ಗುರಿ ಹೊಂದಿದ್ದಾರೆ. ಅಧಿಕಾರದಲ್ಲಿದ್ದವರು ಎಲ್ಲಾ ಅವಕಾಶಗಳನ್ನು ಕ್ರೋಢೀಕರಿಸಿಕೊಂಡು ಅಧಿಕಾರ ಹಂಚಿ ಹೋಗುತ್ತದೆ ಎಂದುಕೊಂಡು ನಮಗೆ ಅನ್ಯಾಯ ಆಗುತ್ತದೆ ಎಂದು ಪದೇ ಪದೇ ಪ್ರತಿಪಾದಿಸುತ್ತಾರೆ. ಇದು ಕರ್ನಾಟಕದಲ್ಲಿ ಆಗುತ್ತಿದೆ. 120 ರಿಂದ 130 ಶಾಸಕರು ಎರಡು ವರ್ಗದವರಿಗೆ ಸೇರಿದವರು. ಸಮಸಮಾಜ ಕಟ್ಟಬೇಕು, ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬುದು ಜಾರಿಯಾಗುತ್ತಲೇ ಇಲ್ಲ. ನಾವೇನೂ ಅವರ ಸ್ವಂತ ಆಸ್ತಿಯಿಂದ ಏನೂ ಕೇಳುತ್ತಿಲ್ಲ. ಕಾನೂನು ಬದ್ಧವಾಗಿ, ಸಂವಿಧಾನಬದ್ಧವಾಗಿ, ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿ ಕೇಳಲಾಗುತ್ತಿದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.