ದಾವಣಗೆರೆ (Davanagere) : ಹದಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಇಎನ್ ಅಧಿಕಾರಿಗಳು ದಾಳಿ ನಡೆಸಿ ಲಕ್ಷ ಮೌಲ್ಯದ 01 ಕೆಜಿ ಗಾಂಜಾ ಮತ್ತು ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಕಿರಣ್ ಬಂಧಿತ ಆರೋಪಿ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಹಾಗೂ ಸೇವನೆ ಮಾಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪೋಲೀಸ್ ಅಧೀಕ್ಷಕರು ಸೂಚನೆ ಹಿನ್ನಲೆಯಲ್ಲಿ ಹಾಗೂ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಚರಣೆ ಮುಂದುವರೆದಿದೆ. ಈ ಬಗ್ಗೆ ಸಿ.ಇ.ಎನ್ ಅಪರಾಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಇಎನ್ ಪೋಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್, ಪೋಲೀಸ್ ನಿರೀಕ್ಷಕರಾದ ಲಕ್ಷ್ಮಣ್ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಅಂಜಿನಪ್ಪ, ಲೋಹಿತ್, ಅಶೋಕ್, ನಿಜಲಿಂಗಪ್ಪ , ಯೋಗೀಶ್ ನಾಯ್ಕ್ ರವರುನ್ನು ಪೋಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.
Read also : ಲೋಕ್ ಆದಾಲತ್ : ರಾಜೀ ಸಂಧಾನದಿಂದ ಮತ್ತೆ ಒಂದಾದ ದಂಪತಿಗಳು