ದಾವಣಗೆರೆ (Davanagere): ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 10.77 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಕುಮಾರಿ ತಸ್ಮೀಯಖಾನಂ ಮತ್ತು ಮುಜೀಬುಲ್ಲಾ ಶೇಖ್ ಬಂಧಿತ ಆರೋಪಿಗಳು.
ಘಟನೆ ವಿವರ : ಸೆ.30 ರಂದು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಅಮಾನುಲ್ಲಾ ಎಂಬುವರ ಮಗಳು ತಸ್ಮೀಯಖಾನಂ ಎಂಬುವರು ಮದ್ಯಾಹ್ನ ಸುಮಾರು 1.30 ಗಂಟೆಗೆಯಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಮನೆ ಒಳಗೆ ಬಂದು ಮುಖಕ್ಕೆ ಬಾಯಿಂದ ಊದಿ, ತದನಂತರ ನೀರಿನಂತ ದ್ರವದಿಂದ ಚಿಮಿಕಿಸಿದ್ದು ಇದರಿಂದ ಅವಳಿಗೆ ಪ್ರಜ್ಞೆ ತಪ್ಪಿದ್ದು ವೇಳೆ ಬೀರುವಿನ ಬೀಗ ಹೊಡೆದು ಅದರಲ್ಲಿದ್ದ ಸುಮಾರು 17 ತೊಲ ಬಂಗಾರದ ವಡವೆ ಮತ್ತು 1.70 ಲಕ್ಷ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋμï ಮತ್ತು ಜಿ. ಮಂಜುನಾಥ್ ಹಾಗೂ ಚನ್ನಗಿರಿ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಸುರೇಶ್, ಜಗದೀಶ್, ಸಿಬ್ಬಂದಿಗಳಾದ ಎ.ಎಸ್.ಐ ಶಶಿಧರ್, ವೀರಭದ್ರಪ್ಪ, ರುದ್ರೇಶ್, ಶ್ರೀನಿವಾಸ್, ರಮೇಶ್, ಗೀತಾಬಾಯಿ, ಹಾಲಮ್ಮ ಒಳಗೊಂಡ ತಂಡವನ್ನು ತಂಡವನ್ನು ರಚಿಸಿದ್ದರು.
ಈ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿಯಾಗಿರುವ ಕುಮಾರಿ ತಸ್ಮೀಯಖಾನಂ (26) ಇವರೇ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ತಾನು ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಶಿವಮೊಗ್ಗದ ಮುಜೀಬುಲ್ಲಾ ಶೇಖ್ ಈತನೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿರುವುದು ಹಾಗೂ ಇದು ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಆರೋಪಿತರಾದ ಕುಮಾರಿ ತಸ್ಮೀಯಖಾನಂ ಮತ್ತು ಮುಜೀಬುಲ್ಲಾ ಶೇಖ್ ಇವರಿಬ್ಬರು ಸೇರಿ ಈ ರೀತಿಯಲ್ಲಿ ಸುಳ್ಳು ಸೃಷ್ಟಿಸಿರುವುದಾಗಿ ತಿಳಿದು ಬಂದಿದೆ.
ಬಂಗಾರ ಮತ್ತು ನಗದು ಹಣವನ್ನು ಆರೋಪಿತ ಮುಜೀಬುಲ್ಲಾ ಶೇಖ್ ಅವರ ಶಿವಮೊಗ್ಗ ಮನೆಯಲ್ಲಿಟ್ಟಿರುವುದರ ಬಗ್ಗೆ ಒಪ್ಪಿಕೊಂಡಿದ್ದರಿಂದ 9.5 ಲಕ್ಷ ಬೆಲೆ ಬಾಳುವ 155 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಟ್ಟು 1,27,000 ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತರು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Read aslo : Davanagere | ಕಳಪೆ ಗುಣಮಟ್ಟದ ಮೋಟಾರ್, ಪಂಪ್ಸೆಟ್ ವಿತರಿಸಿದರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ
ಆರೋಪಿತರನ್ನು ಬಂಧಿಸಿ ಕಳುವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳ ತಂಡವನ್ನುಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.