ದಾವಣಗೆರೆ : ಜಮೀನನಲ್ಲಿ ಉಳುವೆ ಸಂದರ್ಭದಲ್ಲಿ ಪುರತಾನ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ ಎಂದು ನಂಬಿಸಿ 8 ಲಕ್ಷ ರೂ ಪಡೆದು ನಕಲಿ ಬಂಗಾರದ ಬಿಲ್ಲೆ ನೀಡಿ ಮೋಸದ ಮಾಡಿದ್ದ ಆರೋಪಿಯನ್ನು ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹಡೋನಹಳ್ಳಿ ಗ್ರಾಮ ಲಕ್ಷ್ಮಪ್ಪ (60) ಬಂಧಿತ ಆರೋಪಿ
ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಮಾರನಹಳ್ಳಿ ಗ್ರಾಮದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಾರುತಿ ನಗರದ ಸುಧಾಕರ ಎಂಬುವವರಿಗೆ ಆರೋಪಿಯು ಜಮೀನನಲ್ಲಿ ಉಳುಮೆ ಸಂದರ್ಭದಲ್ಲಿ ಬಂಗಾರದ ಬಿಲ್ಲೆಗಳು ಸಿಕ್ಕಿವೆ ಎಂದು ಹೇಳಿ ನಂಬಿಸಿ 08 ಲಕ್ಷ ರೂ ಹಣವನ್ನು ಪಡೆದು ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಮಲೆಬೆನ್ನೂರು ಪೊಲೀಸರು ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ. ಡಿವೈಎಸ್ಪಿ ಬಸವರಾಜ್ ಬಿ.ಎಸ್. ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ & ಹಾರುನ್ ಅಖರ್. ಪಿ.ಎಸ್.ಐ (ಕಾ&ಸು) ಚಿದಾನಂದಪ್ಪ,ಎಸ್.ಬಿ. ಪಿಎಸ್‌ಐ (ತನಿಖೆ) ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಈ ತಂಡ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನಿಂದ ಒಟ್ಟು 5,50,000/- ರೂ ನಗದು ಹಣ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Read also : ದಾವಣಗೆರೆ|ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ
ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಹಾರುನ್ ಅಖೈರ್ ಪಿ.ಎಸ್.ಐ (ಕಾ.ಸು), ಚಿದಾನಂದಪ್ಪ, ಪಿ.ಎಸ್.ಐ (ತನಿಖೆ) ಶ್ರೀನಿವಾಸ ಎ.ಎಸ್.ಐ, ಸಿಬ್ಬಂದಿಯವರಾದ ಶಿವಕುಮಾರ, ಫೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ, ವಿರೇಶಪ್ಪ, ಮಲ್ಲಿಕಾರ್ಜುನ, ಪ್ರವೀಣ್ ಪಾಟೀಲ್, ಪ್ರದೀಪ್ ಕುಮಾರ, ವಿಜಯ, ಅನ್ಸರ್ ಅಲಿ, ರಾಜಪ್ಪ, ಮುರುಳಿಧರ್ ರವರನ್ನು ಎಸ್ಪಿ ಉಮಾಪ್ರಶಾಂತ್ ಪ್ರಶಂಸಿಸಿದ್ದಾರೆ.