ದಾವಣಗೆರೆ : ಮಹಬೂಬ್ ನಗರದಲ್ಲಿ ಮನೆ-ಮನೆ ಕಸ ಸಂಗ್ರಹಿಸುವ ಸಮಯದಲ್ಲಿ ಕಸ ಸಂಗ್ರಹಣೆ ವಾಹನದ ಚಾಲಕ ಮತ್ತು ಕಾರ್ಮಿಕನ ಮೇಲೆ ಹಲ್ಲೆ ನಡೆಸಿ, ನಿಂದಿಸಿ ಗಲಾಟೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಹಾಗೂ ಪಾಲಿಕೆಯ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸೂಕ್ತ ಕಾನೂನು ರಕ್ಷಣೆ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಮೆಹಬೂಬ್ ನಗರದಲ್ಲಿ 4ನೇ ಕ್ರಾಸಿನಲ್ಲಿ ದಿನನಿತ್ಯದಂತೆ ಮನೆ-ಮನೆ ಕಸ ಸಂಗ್ರಹಣೆಗಾಗಿ ಪಾಲಿಕೆ ಕಸ ಸಂಗ್ರಹಣೆ ವಾಹನವು ಕೆಲಸ ನಿರ್ವಹಿಸಲು ಹೋಗಿದೆ. ಆ ಸಮಯದಲ್ಲಿ ಹಸಿ ಕಸ-ಒಣ ಕಸ ಹಾಗೂ ಹಾನಿಕಾರಕ ಕಸಗಳನ್ನು ಬೇರ್ಪಡಿಸಿ ನೀಡುವುದು ಪ್ರತಿನಿತ್ಯ ಕಸ ಸಂಗ್ರಹಣ ವಾಹನದಲ್ಲಿ ಧ್ವನಿವರ್ಧಕಗಳ ಮೂಲಕ ಹೇಳುತ್ತಿರುತ್ತಾರೆ.
ಅಲ್ಲಿನ ನಿವಾಸಿಗಳಾದ ನೂರು ಮತ್ತು ಅಜ್ಜು ಮತ್ತು ಇತರರು ಸೇರಿದಂತೆ ಬಂದು ಚಾಲಕನನ್ನು ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾಗಿ ಸರ್ಕಾರಿ ವಾಹನದ ಮೇಲೆ ಹೊಡೆದು ಮೀಟರ್ ಮುರಿದು ವಾಹನಕ್ಕೆ ಘಾಸಿಗೊಳಿಸಿರುತ್ತಾರೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕರ್ತವ್ಯ ನಿರತ ಕಾರ್ಮಿಕರಿಗೆ ಮತ್ತು ಪಾಲಿಕೆ ಎಲ್ಲಾ ಹೊರಗುತ್ತಿಗೆ ಮತ್ತು ಗುತ್ತಿಗೆಯ, ಯು.ಬಿ.ಡಿ. ಕಾರ್ಮಿಕರಿಗೂ ರಕ್ಷಣಾತ್ಮಕ ನಿಯಮಗಳನ್ನು ರೂಪಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಲಿಂಗರಾಜು ಎಂ ಗಾಂಧಿನಗರ ಒತ್ತಾಯಿಸಿದ್ದಾರೆ.
Read also : ಸಂತ ಸೇವಾಲಾಲ್ ಜಯಂತಿ ಆಚರಣೆ ಮಾಡದೇ ಇರುವುದು ಅವರ ಕಾರ್ಯವೈಖರಿಗೆ ಕೈಗನ್ನಡಿ :ಧರ್ಮ ನಾಯ್ಕ
ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಸಮಾಜದ ಗಲೀಜನ್ನು ತಮ್ಮ ಮನೆಯ ಮಕ್ಕಳು ಮಾಡಿರುವ ಗಲೀಜು ಎಂಬ ಮನೋಭಾವದೊಂದಿಗೆ ಸ್ವಚ್ಛಗೊಳಿಸುತ್ತಿರುವುದು ನಮ್ಮ ಕಣ್ಣಿಗೆ ಕಾಣಿಸುತ್ತಿದೆ.ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಸೂಕ್ತವಾದ ಕಾನೂನು ಮತ್ತು ನಿಯಮಗಳನ್ನು ರೂಪಿಸಿ ಅವರಿಗೆ ರಕ್ಷಣೆ ನೀಡಬೇಕು. ಜನಸಾಮಾನ್ಯರಲ್ಲಿ ಮತ್ತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಪಾಲಿಕೆಯ ಕಾರ್ಮಿಕರ ಮೇಲೆ ಹಲ್ಲೆ ಮಾಡಿದಂತಹ ನೂರು ಮತ್ತು ಅಜ್ಜು ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಹಿತಕರ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.
