ಹನಿ 1
ಬೂಟು ತೂರಿ,
ಕ್ಷಮೆ ಕೇಳದ ವಕೀಲ,
ಮುಟ್ಟಿಸಿಕೊಳ್ಳಲಾರದ ಜನರು
ಇಬ್ಬರ ಕೈಯ್ಯಲ್ಲೂ
ಇದೆ ಸಂವಿಧಾನ!
ಹನಿ 2
ಶೌಚಗುಂಡಿಯಿಂದ ಮೇಲೇಳದೆ
ಮತ್ತೂ ಕೆಲವರು
ಬೊಗಸೆ ನೀರಿಗಾಗಿ
ಮೈಮೇಲೆ ಮಲ ಸುರುವಿಕೊಂಡ ದಿನ
ಮತ್ತೆ
ಹುಟ್ಟುತ್ತಲೇ ಇರುತ್ತಾರೆ
ಕೆಲವರಂತೂ
ಹೂಳುವಾಗಲೂ ಮತ್ತೆ ಮತ್ತೆ ಸಾಯುತ್ತಾರೆ.
Read also : ಪುಸ್ತಕ ವಿಮರ್ಶೆ|ದುಬೈ ದೌಲತ್ತು – ಕವಿಯ ಕಣ್ಣಳತೆಯಲ್ಲಿ ದುಬೈ ಕಥನ
ಹೀಗೆ
ಮತ್ತೆ ಹುಟ್ಟಿ
ಮತ್ತೆ
ಸಾಯುವಾಗ
ಉಸಿರಾಡಲು ಕೊಸರಾಡುತ್ತದೆ ಸಂವಿಧಾನ!
ಬಿ.ಶ್ರೀನಿವಾಸ
