ದಾವಣಗೆರೆ : ಕೆನರಾ ಬ್ಯಾಂಕ್ ಬಿಳಿಚೋಡು ಶಾಖೆಯ ವತಿಯಿಂದ ಗ್ರಾಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸ್ಯಾಚುರೇಷನ್ ಕ್ಯಾಂಪೇನ್ ಇತ್ತೀಚೆಗೆ ನಡೆಯಿತು.
ಕೆನರಾ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕರಾದ ಸಂಜಯ್ ಕುಮಾರ್ ಎಚ್.ಜಿ., ಸಾಮಾಜಿಕ ಭದ್ರತಾ ಯೋಜನೆಗಳ ಮಹತ್ವ ಮಾಹಿತಿ ನೀಡಿದ ಅವರು, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಅಟಲ್ ಪಿಂಚಣಿ ಯೋಜನೆ (APY)ಗಳ ಲಾಭಗಳನ್ನು ತಿಳಿಸಿದರು. ಅಲ್ಲದೆ, ಗ್ರಾಹಕರು ಸೈಬರ್ ವಂಚನೆಗಳಿಂದ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
Read also : ದಾವಣಗೆರೆ|ಜೀವ ರಕ್ಷಣಾ ಕೌಶಲ್ಯ ಕಲಿತು ಜೀವ ಉಳಿಸಿ : ಸುಭಾನ್ ಸಾಬ್ ನದಾಫ್
ಬೆಂಗಳೂರು ಮಹಾಪ್ರಬಂಧಕರಾದ ದಿಲ್ಲಿ ಬಾಬು ಜಿ.ಆರ್., ಉಪ ಮಹಾಪ್ರಬಂಧಕರಾದ ತನ್ಮಯ ದಾಸ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಪಿಡಿಒ ನಂದಿ ಲಿಂಗೇಶ್, ವಿಭಾಗೀಯ ಪ್ರಬಂಧಕರಾದ ಪಡದಯ್ಯ ಹಿರೇಮಠ್, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾದ ಸಂಜಯ್ ಕುಮಾರ್ ಎಚ್.ಜಿ., ಬಿಳಿಚೋಡು ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ಯಾಂಕ್ ಅಧಿಕಾರಿಗಳಾದ ಶಕ್ತಿ ಪ್ರಸಾದ್ ಜೆ.ಟಿ., ತೇಜಸ್ವಿನಿ ಪಿ., ಹಾಗೂ ಸಿಬ್ಬಂದಿಗಳಾದ ಮೇಕೆಲಾ ಕೀರ್ತಿ, ಆಂಜಿನಪ್ಪ, ಜ್ಯೋತಿ, ಪರಶುರಾಮಪ್ಪ, ಬಸವರಾಜ, ಆರ್ಪಿತಾ ಉಪಸ್ಥಿತರಿದ್ದರು.