Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ | ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾಲಿಕೆ ನೌಕರರಿಂದ ಪ್ರತಿಭಟನೆ
ತಾಜಾ ಸುದ್ದಿ

ದಾವಣಗೆರೆ | ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾಲಿಕೆ ನೌಕರರಿಂದ ಪ್ರತಿಭಟನೆ

Dinamaana Kannada News
Last updated: July 9, 2025 2:14 pm
Dinamaana Kannada News
Share
protest davanagere
SHARE

ದಾವಣಗೆರೆ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದ  ನೇತೃತ್ವದಲ್ಲಿ ಪಾಲಿಕೆ ಅವರಣದಲ್ಲಿ  ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

ಕೆ.ಎಸ್.ಗೋವಿಂದರಾಜು ಮಾತನಾಡಿ, ರಾಜ್ಯದ ಪಾಲಿಕೆಗಳ ಎಲ್ಲಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. 7ನೇ ವೇತನ ಆಯೋಗದ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದಂತೆ ಪಾಲಿಕೆ ಅಧಿಕಾರಿ, ನೌಕರರಿಗೂ ಯಥಾವತ್ ಜಾರಿಗೊಳಿಸಬೇಕು. ಸರ್ಕಾರವು ಆರ್ಥಿಕ ಇಲಾಖೆಯಿಂದಲೇ ಪೂರ್ಣ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಎಲ್ಲಾ ಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ-2011ಕ್ಕೆ ಕಳೆದ 14 ವರ್ಷಗಳಿಂದ ತಿದ್ದುಪಡಿ ಮಾಡಿಲ್ಲ. ತಕ್ಷಣ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಬೇಕು. ನಗರಸಭೆ, ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ವ್ಯವಸ್ಥಾಪಕರಿಗೆ ಮತ್ತು ಕಂದಾಯಾಧಿಕಾರಿಗಳಿಗೆ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1ಕ್ಕೆ ಮುಂಬಡ್ತಿ ನೀಡುತ್ತಿದ್ದು, ಅದರಂತೆ ಪಾಲಿಕೆಯ ಕಚೇರಿ ವ್ಯವಸ್ಥಾಪಕರು, ಸಹಾಯಕ ಕಂದಾಯ ಅಧಿಕಾರಿಗಳಿಗೆ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1ಕ್ಕೆ ಮುಂಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

Read also : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ: ಆರ್ಯವೈಶ್ಯ ಸಮಾಜ ಬಾಂಧವರಿಂದ ಬೈಕ್ ರ‍್ಯಾಲಿ

ಸರ್ಕಾರಿ ನೌಕರರಿಗೆ ಜಾರಿಗೊಳಿಸಿದ ನಗದು ರಹಿತ ಆರೋಗ್ಯ ಸೌಲಭ್ಯದ ಜ್ಯೋತಿ ಸಂಜೀವಿನಿ ಅಥವಾ ಆರೋಗ್ಯ ಸಂಜೀವಿನಿ ಯೋಜನೆಯನ್ನು ಮಹಾ ನಗರ ಪಾಲಿಕೆ ಅಧಿಕಾರಿ, ನೌಕರರು, ಪೌರ ಕಾರ್ಮಿಕರನ್ನು ಒಳಗೊಂಡAತೆ ಇತರೆ ಎಲ್ಲಾ ನೌಕರರು ಮತ್ತು ಅವಲಂಭಿತರಿಗೂ ಜಾರಿಗೊಳಿಸಬೇಕು. ಪಾಲಿಕೆಗಳಲ್ಲಿ ಹೊರ ಗುತ್ತಿಗೆ ಆದಾರಿತ ವಾಹನ ಚಾಲಕರು, ಯುಜಿಡಿ ಹೆಲ್ಪರ್ಸ್, ಲೋಡರ್ಸ್, ಹೆಲ್ಪರ್ಸ್, ಗಾರ್ಡನರ್ಸ್, ಡಾಟಾ ಎಂಟ್ರಿ ಆಪರೇಟರ್ಸ್, ವಾಲ್ವ್ಮನ್, ಸ್ಮಶಾನ ಕಾವಲುಗಾರರು ಇತರೆ ನೌಕರರನ್ನು ನೇರ ಪಾವತಿಗೆ ಒಳಪಡಿಸಿ, ಸಂಪೂರ್ಣವಾಗಿ ಶೇ.100ರಷ್ಟು ಸರ್ಕಾರದಿಂದಲೇ ವೇತನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ವೇಳೆ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪಾಂಡುರಾಜ್, ಕಾರ್ಯದರ್ಶಿ ಡಿ.ಸಿ.ಬಸವರಾಜಯ್ಯ ಇತರರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯುಕ್ತರಾದ ರೇಣುಕಾ ಹಾಗೂ ಸಂಜೆ ಜಿಲ್ಲಾ ಉಸ್ತುವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷೆ ಎನ್.ನಾಗರತ್ನಮ್ಮ, ಸಹ ಕಾರ್ಯದರ್ಶಿ ನಾಮದೇವ, ಖಜಾಂಚಿ ಎಂ.ಅಸ್ಲA, ಪೌರ ಕಾರ್ಮಿಕರ ಸಂಘದ ಎಲ್.ಎಂ.ಹನುಮAತಪ್ಪ, ಎನ್.ನೀಲಗಿರಿಯಪ್ಪ, ಎಲ್.ಎಂ.ಎಚ್.ಸಾಗರ್, ಚಾಲಕರ ಸಂಘದ ಅಧ್ಯಕ್ಷ ವೀರೇಶ, ಸುರೇಶ ಪಾಟೀಲ, ಎಇಇ ಜಗದೀಶ, ಚೌಹಾಣ್, ಮಂಜುಳಾ ದೇವಿ, ದಿಲ್ಷಾದ್ ಬೇಗ್, ಶ್ರೇಯಾಂಕ, ಮಂಜಪ್ಪ ನಾಯ್ಕ, ಬಸವಣ್ಣ, ಸುನಿಲ್, ಪ್ರಶಾಂತ, ಮದನ್, ಪ್ರಕಾಶ, ಹರೀಶ ಇತರರು ಇದ್ದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಅರ್ಪಿಸಿದರು.

TAGGED:Davangere Municipal Corporation Employees' AssociationDinamana.comKannada Newsprotestದಾವಣಗೆರೆ ಜಿಲ್ಲೆ .ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದಿನಮಾನ.ಕಾಂ
Share This Article
Twitter Email Copy Link Print
Previous Article Arya Vaishya Samaj ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ: ಆರ್ಯವೈಶ್ಯ ಸಮಾಜ ಬಾಂಧವರಿಂದ ಬೈಕ್ ರ‍್ಯಾಲಿ
Next Article Davangere MP Dr. Prabha Mallikarjun ಬೈಕ್, ಟ್ಯಾಕ್ಸಿ ಪರವಾದ ಧೋರಣೆ ವಿರುದ್ಧ ಧ್ವನಿಯೆತ್ತಲು ಸಂಸದೆ ಡಾ. ಪ್ರಭಾಗೆ ಮನವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ಬಂದ್ ವೇಳೆ ದೌರ್ಜನ್ಯ : ಬಿಜೆಪಿ ಮುಖಂಡರ ವಿರುದ್ದ ಯುವ ಕಾಂಗ್ರೆಸ್ ದೂರು

ದಾವಣಗೆರೆ : ಶನಿವಾರ ದಾವಣಗೆರೆ ಬಂದ್ ಕರೆ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರ ಮೇಲೆ ಮಾಡಿದ ದಬ್ಬಾಳಿಕೆ-ದೌರ್ಜನ್ಯ ಖಂಡಿಸಿ…

By Dinamaana Kannada News

ಅವೈಜ್ಞಾನಿಕ ಸೇತುವೆಯಿಂದ ಅಪಘಾತಗಳು ಮತ್ತು ಟ್ರಾಫಿಕ್ ಜಾಮ್ : ಪರ್ಯಾಯ ವ್ಯವಸ್ಥೆಗೆ ಸಂಸದರಿಂದ ಒತ್ತಡ

ದಾವಣಗೆರೆ (Davanagere): ಭೂಮಿಕ ನಗರದಿಂದ ರಾಮನಗರಕ್ಕೆ ಸಾಗುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆಯಿಂದ ಹಲವಾರು ಅಪಘಾತಗಳಿಗೆ ಹಾಗೂ ಟ್ರಾಫಿಕ್…

By Dinamaana Kannada News

Davanagere | ನಮ್ಮ ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ : ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ದಾವಣಗೆರೆ (Davanagere) :  ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿರುವ ಜಿಎಂಐಟಿ ಪ್ರಸ್ತುತ ಜಿಎಂ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?