ದಾವಣಗೆರೆ (Davanagere): ಸಂತೇಬೆನ್ನೂರಿನಲ್ಲಿ ಅಪ್ರಾಪ್ತ ಬಾಲಕ ವಾಹನ ಚಾಲನೆ ಹಿನ್ನಲೆಯಲ್ಲಿ ವಾಹನ ಮಾಲೀಕರಿಗೆ 25 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಸಂತೇಬೆನ್ನೂರು ಪಟ್ಟಣದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲುಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿ ವಿಜಯಕುಮಾರ್‍ಎಮ್ ಸಂತೋಷ್ ಮತ್ತು ಮಂಜುನಾಥ್‍ರವರು ಹಾಗೂ ಚನ್ನಗಿರಿ ಎಎಸ್ಪಿ ಶ್ಯಾಮ್ ವರ್ಗೀಸ್‍ರವರ ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ಪೊಲೀಸ್‍ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಸಂತೇಬೆನ್ನೂರು ಠಾಣಾ ಪಿ.ಎಸ್.ಐಗಳಾದ ಜಗದೀಶ್ ಜಿ ಮತ್ತು ಚನ್ನವೀರಪ್ಪ ಹಾಗು ಸಿಬ್ಬಂದಿ ಹೊನ್ನೂರು ಸ್ವಾಮಿ ಸಂತೇಬೆನ್ನೂರು ಪಟ್ಟಣದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತ್ತು.
ಸಂತೇಬೆನ್ನೂರು ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಓರ್ವ ಬೈಕ್ ಚಾಲಕ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಬಂದವರನ್ನು ತಡೆದು ನಿಲ್ಲಿಸಲು ಹೋದಾಗ ಅಪ್ರಾಪ್ತ ವಯಸ್ಸಿನ ಹುಡುಗನು ಬೈಕ್ ಬಿಟ್ಟು ಹೋಡಿ ಹೋಗಿದ್ದು, ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ನೀಡಿದ ಹಿನ್ನಲೆಯಲ್ಲಿ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಜಪ್ತು ಮಾಡಿ ಪ್ರಕರಣ ದಾಖಲಿಸಿ 2 ನೇಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ಚನ್ನಗಿರಿ ನ್ಯಾಯಾಲಯಕ್ಕೆ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕನ ಮಾಲೀಕರಾದ ಪ್ರಸನ್ನ, ಹೊಳಲ್ಕೇರೆ ತಾ, ಚಿತ್ರದುರ್ಗ ಜಿಲ್ಲೆ. ರವರ ಮೇಲೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಲಯವು ಆರೋಪಿತರಾದ ಬೈಕ್ ಮಾಲೀಕರು ತಮ್ಮ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ 25.000 ರೂ ಗಳ ದಂಡ ವಿಧಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲುಕೊಡುವ ಪಾಲಕರಿಗೆ / ವಾಹನ ಮಾಲೀಕರಿಗೆ ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ಪೊಲೀಸ್ ನವರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು. ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದ್ದಾರೆ.
Read also : ಇಸ್ಫೀಟ್ ಜೂಜಾಟ : ಪೊಲೀಸರು ದಾಳಿ, 1,04,110 ರೂ ಹಣ ವಶಕ್ಕೆ