ದಾವಣಗೆರೆ (Davanagere): ಇಲ್ಲಿನ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಈಚೆಗೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾಘಟಕದ ಅಧ್ಯಕ್ಷರಾಗಿ ಸಿ. ಚಂದ್ರಶೇಖರ್ ಐಗೂರು ಆಯ್ಕೆಯಾಗಿದ್ದಾರೆ.
Read Also : Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ.21 ರಂದು ವಕೀಲರಿಂದ ಸರ್ಕಾರಕ್ಕೆ ಮನವಿ
ಉಪಾಧ್ಯಕ್ಷರಾಗಿ ಡಾ. ಎಚ್ ಎಸ್ ಮಂಜುನಾಥ ಕುರ್ಕಿ, ಕಿರುವಾಡಿ ವಿ ಸೋಮಶೇಖರ್, ವೇದಮೂರ್ತಿ ಶಾಮನೂರ್, ಆರ್.ಟಿ. ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಬಸವರಾಜ್, ಕಾರ್ಯದರ್ಶಿಗಳಾಗಿ ಎ.ವಿ ಪ್ರಸಾದ್, ಎಂ.ಜೆ ಗಿರೀಶ್, ಬಿ.ಎಂ ವಿಶ್ವನಾಥ್, ಎಸ್.ಎ ಸುಧಾ, ಸಂಚಾಲನ ಕಾರ್ಯದರ್ಶಿಗಳಾಗಿ ಡಿ.ಎಂ ಶಿವಕುಮಾರ್, ಖಜಾಂಚಿಯಾಗಿ ಬಸವರಾಜ ಬೆಳಗಾವಿ ಆಯ್ಕೆಯಾಗಿದ್ದಾರೆ ಎಂದು ಉಪಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ವೈ. ವೃಷಭೇಂದ್ರಪ್ಪ ತಿಳಿಸಿದ್ದಾರೆ.