ದಾವಣಗೆರೆ : ಇಲ್ಲಿನ ಕೆ ಆರ್ ರಸ್ತೆಯ ಎಲ್‍ಐಸಿ ಕಚೇರಿ ಹಿಂಭಾಗದ ಬಿ.ಟಿ.ಲೇಔಟ್‍ನಲ್ಲಿ ಅಪರಿಚಿತ ವ್ಯಕ್ತಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು ರಾಜಸ್ಥಾನದ ಅಶೋಕ್ ಕುಮಾರನನ್ನು ಬಂಧಿಸಿದ್ದಾರೆ .
ಆರೋಪಿತನಿಂದ ಆಫೀಮ್ ಮೊಗ್ಗಿನ ಒಣಗಿದ ಪೌಡರ್ ಇದ್ದು, ಪ್ಲಾಸ್ಟಿಕ್ ಕವರ್ ಸಮೇತ್ ಸುಮಾರು 35 ಗ್ರಾಂ 2) MDMA crystal 3 ಸಣ್ಣ ಪ್ಲಾಸ್ಟಿಕ್ ಕವರ್ ನಲ್ಲಿ ಗೋಧಿ ಬಣ್ಣದಂತೆ ಕಂಡು ಬಂದಿದ್ದು, ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 08 ಗ್ರಾಂ, 3)OPOUM ಪೇಸ್ಟ್ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 07 ಗ್ರಾಂ, 4) MDMA crystal ಬಿಳಿ ಬಣ್ಣದಂತೆ ಕಂಡು ಬರುವ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 15 ಗ್ರಾಂ ಸದರಿ ಮಾದಕ ವಸ್ತುಗಳನ್ನು ತೂಕ ಮಾಡಲಾಗಿ ಒಟ್ಟು ತೂಕ 65 ಗ್ರಾಂ ಇದ್ದು, ಇವುಗಳ ಅಂದಾಜು ಬೆಲೆ 4,50,000/- ರೂಪಾಯಿಗಳು ಆಗಿದೆ.
ಕಾನೂನು ಬಾಹಿರವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿತ ಅಶೋಕ್ ಯಾನೆ ಅಶೋಕ್ ಕುಮಾರ್ ತಂದೆ ಪೂನಮ್ ರಾಮ್, 24 ವರ್ಷ ಈತನ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್, ಪಿಎಸ್‍ಐ ಇಮ್ತಿಯಾಜ್, ಸಿಬ್ಬಂದಿಯವರಾದ ಡಿಸಿಆರ್‍ಬಿ ವಿಭಾಗದ ಮಜೀದ್, ರಮೇಶ್ ನಾಯ್ಕ್, ಕೆ.ಟಿ. ಆಂಜನೇಯ,ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.