ದಾವಣಗೆರೆ (DAVANAGERE DISTRICT): ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ೫ನೇ ವರ್ಷದ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆ ಆ. 17 ಮತ್ತು 18 ರಂದು ನಡೆಯಲಿದೆ.
ದಾವಣಗೆರೆ ಜಿಲ್ಲೆಯಿಂದ ಎಲ್ಲಾ ಯೋಗ ಕ್ರೀಡಾಪಟುಗಳು ಮತ್ತು ನಗರದ ಎಲ್ಲಾ ಯೋಗ ಕೇಂದ್ರಗಳಲ್ಲಿರುವ ಆಸಕ್ತ ಯೋಗ ಕ್ರೀಡಾಪಟುಗಳು ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ನೇರವಾಗಿ ಭಾಗವಹಿಸಲು ಅರ್ಹತೆ ಇದೆ.
READ ALSO : DAVANAGERE DISTRICT POLICE : ಕಾನೂನು ಸುವ್ಯವಸ್ಥೆಗೆ ಜನರ ಸಹಕಾರ ಅಗತ್ಯ : ಎಸ್ಪಿ ಉಮಾಪ್ರಶಾಂತ್
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಯೋಗಾಚಾರ್ಯ ಡಾ.ಎನ್.ಪರಶುರಾಮ್
(9035551568) ದೂರವಾಣಿ ಸಂಪರ್ಕಿಸಬಹುದು ಎಂದು ಡಾ.ಎನ್.ಪರಶುರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.