ಹರಿಹರ : ತಾಲೂಕಿನ ಗುತ್ತೂರು ಗ್ರಾಮದಲ್ಲಿ ಸ್ಮಶಾನ ಜಲಾವೃತ್ತವಾಗಿರುವುರಿಂದ ಮೃತ ಅಂತ್ಯಕ್ರಿಯೆಗೆ ಪರದಾಡಿದ ಘಟನೆ ನಡೆದಿದ್ದು, ನದಿ ಉಕ್ಕಿ ಹರಿಯುತ್ತಿರುವ ನಡುವೆಯೇ ಜನರ ನದಿ ದಾಟಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಗ್ರಾಮದ ಮಂಜಪ್ಪ ನಿಧನರಾಗಿದ್ದರು. ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಸ್ಮಶಾನ ಜಲಾವೃತ್ತವಾಗಿದ್ದರಿಂದ ಅಂತ್ಯಕ್ರಿಯೆಗೆ ಪರದಾಡಿದರು, ನಂತರ ನದಿ ದಾಟಿ ಗುಡ್ಡದ ಮೇಲೆ ಅಂತ್ಯ ಕ್ರಿಯೆ ನಡೆಸಿದ್ದಾರೆ.
ಮಲೆನಾಡ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯೂ ತುಂಬಿ ಹರಿಯುತ್ತಿದೆ, ಇದೇ ನದಿಯಿಂದ ಬಂದ ಹಿನ್ನೀರಿನಲ್ಲಿ ಮೃತದೇಹವನ್ನು ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ಮಾಡುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ. ಸರ್ಕಾರವು ಇತ್ತಕಡೆ ಗಮನ ಹರಿಸಿ ಸ್ಮಶಾನ ಭೂಮಿಯನ್ನು ಕೂಡಲೇ ಒದಗಿಸಬೇಕೆಂದು ಗ್ರಾಮದ ದಲಿತ ಮುಖಂಡರು ಆಗ್ರಹಿಸಿದ್ದಾರೆ. ಈ ಹಿಂದೆ ಸ್ಮಶಾನದ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ,ಎಷ್ಟೋ ಬಾರಿ ಮನವಿ ಮಾಡಿದರು ಸ್ಪಂದಿಸಿಲ್ಲ.
ಗ್ರಾಮದ ಹಿರಿಯರಾದ ದೊಡ್ಮನಿ ಕೊಟ್ರಪ್ಪ.ಎನ್ ಕೆ ಡಿ ಕೊಟ್ರಪ್ಪ. ಅಂಜಿನಪ್ಪ ಸದಸ್ಯರು.ಡಿಕೆಜಿ ಅಜ್ಜಪ್ಪ.ಜೆಡಿಎಂ.ಅಂಜಿನಪ್ಪ.ಹೆಚ್ ಬಿ ಸಿ ನಾಗರಾಜ್.ಮಾರ್ಕಂಡಪ್ಪ. ಬೋಳಪ್ಪ.ಬಸವರಾಜಪ್ಪ. ಚೌಡಪ್ಪ.ಭೂತಪ್ಪರ ಹಾಲಪ್ಪ. ನಿಂಗಪ್ಪ ಚಿಕ್ಕಳ್ಳೋರು. ಹನುಮಂತಪ್ಪ.ಬೈಲಪ್ಪ ದೊಡ್ಮನೆ. ಬಸಪ್ಪ ಕುಲ್ಡವರ.ಹನುಮಂತಪ್ಪ. ಎಂಬಿ ಅವಿನಾಶ್.ಎಂ.ಡಿ ನಾಗರಾಜ.ಮರಿದೇವ. ಮುಂತಾದವರು ತಮ್ಮ ಅಳಲನ್ನು ತೋಡಿಕೊಂಡರು ಅಲ್ಲದೇ ಶೀಘ್ರವೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.