ದಾವಣಗೆರೆ : ನಗರದ ಹಳೇ ಕುಂದುವಾಡ ಪೂರ್ವ ಪ್ರಾಥಮಿಕ ಎಲ್ ಕೆಜಿ ಶಿಕ್ಷಕಿ ಮತ್ತು ಆಯಾ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ಡಿಸೆಂಬರ್ 1ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗಿದೆ.
ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿ ಅರ್ಜಿಗೆ ಸಲ್ಲಿಸಲು 45 ವರ್ಷದ ಒಳಗಿನ ವಯಸ್ಸಿನವರಾಗಿರಬೇಕು, ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು, ಪದವಿ ಪೂರ್ವ ಶಿಕ್ಷಣದಲ್ಲಿ ಕನಿಷ್ಠ 50ರಷ್ಟು ಅಂಕಗಳನ್ನು ಪಡೆದಿರಬೇಕು, ಎನ್ ಸಿ ಟಿ ಇ ಸಂಸ್ಥೆಯಿಂದ ಮಾನ್ಯತೆ ಪಡೆದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೋಮೋ ಇನ್ ನರ್ಸರಿ ಟೀಚರ್ಸ್ ಎಜುಕೇಶನ್ ಫ್ರೀ ಸ್ಕೂಲ್ ಎಜುಕೇಶನ್ ಅರ್ಲಿ ಚೈಲ್ಡ್ ಹುಡ್ ಎಜುಕೇಶನ್ ಪ್ರೋಗ್ರಾಮ್ ಡಿಇಸಿಡಿ ಅಥವಾ ಬಿಇಡಿ ನರ್ಸರಿ ಪದವಿ ಪಡೆದಿರಬೇಕು.
Read also : ಶಿಕ್ಷಣದ ಜತೆಗೆ ಶಿಸ್ತು, ಸಂಯಮ, ಸುಸಂಸ್ಕಾರ ಮೈಗೂಡಿಸಿಕೊಳ್ಳಿ : ಬಾಲನ್ಯಾಯ ಮಂಡಳಿ ಅಧ್ಯಕ್ಷ ಸಿ.ನಾಗೇಶ್
ಆಸ್ತಕರು ಹಳೇ ಕುಂದುವಾಡ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಇವರ ಬಳಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9731466642 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.
