ದಾವಣಗೆರೆ: ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಮತ್ತೆ ಮೊಹಮ್ಮದ್ ಸಿರಾಜ್ ಮುಂದುವರಿದ್ದಾರೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹುದ್ದೆ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿತ್ತು. ಇದರಲ್ಲಿ ಮೊಹಮ್ಮದ್ ಸಿರಾಜ್ ಜಯ ಸಿಕ್ಕಿದೆ.
ಮೊಹಮ್ಮದ್ ಸಿರಾಜ್ ರವರನ್ನು ಬದಲಾವಣೆ ಮಾಡಿ ಬಿ.ಎನ್.ಇರ್ಷಾದ್ ಅಹಮದ್ ರವರನ್ನು ನೂತನ ಅಧ್ಯಕ್ಷರನ್ನಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಆದೇಶ ಜಾರಿ ಮಾಡಲಾಗಿತ್ತು. ಸದರಿ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್ ಸಿರಾಜ್ ಅವರು ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಮೊಕದ್ದಮೆ ದಾಖಲಿಸಿದ್ದರು. ಉಚ್ಛನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೊರಡಿಸಿದ ಆದೇಶಕ್ಕೆ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಲಾಗಿದ್ದು, ದಿನಾಂಕ 27/08/2024 ರಂದು ಮೊಹಮ್ಮದ್ ಸಿರಾಜ್ ರವರು ಪುನಃ ಅಧ್ಯಕ್ಷರಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಾಮೀರ್ ಆಲಂ ಖಾನ್, ಸಿರಾಜುದ್ದೀನ್ ವಕೀಲರು, ಸದಸ್ಯರಾದ ಅಬುಸ್ವಾಲೇಹಾ, ಅಬ್ದುಲ್ ಜಬ್ಬಾರ್, ಶೇಖ್ ಅಹಮದ್, ಆಸಿಫ್ ಜುನೇದಿ, ಗಣ್ಯ ವ್ಯಕ್ತಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.