ದಾವಣಗೆರೆ.ಜ.3: ಕರ್ನಾಟಕ ಕರಾವಳಿ ಪ್ರದೇಶಗಳ ಅಭಿವೃದ್ಧಿ ನಿಯಂತ್ರಣ ತಜ್ಞ ಸಮಿತಿಯ ಸದಸ್ಯರಾಗಿ ದಾವಣಗೆರೆ ಬಾಪೂಜಿ ಎಂಜಿನಿಯರಿAಗ್ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಮಂಗಳೂರು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ಡಾ.ಎಸ್.ಮಂಜಪ್ಪ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಭಾರತ ಸರ್ಕಾರದ ಗೆಜಿಟಿರ್‌ನಲ್ಲಿ ಡಾ.ಎಸ್.ಮಂಜಪ್ಪ ಅವರನ್ನು ತಜ್ಞ ಸದಸ್ಯರಾಗಿ ಪ್ರಕಟಿಸಲಾಗಿದೆ. ಕರಾವಳಿ ನಿಯಂತ್ರ ಣ ವಲಯ ಕಾನೂನು ಪರಿಸರ ಮತ್ತು ಹವಾಮಾನ ಬದಲಾವಣೆ ಮಂAತ್ರಾಲಯ ಕೇಂದ್ರ ಸರ್ಕಾರ ಇದರ ಅಡಿಯಲ್ಲಿ ಕೇಂದ್ರ ಸರ್ಕಾರ 1994 ರಿಂದ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ನಿಯಂತ್ರಿಸಲು ಕರಾವಳಿ ಪ್ರದೇಶಗಳಿರುವ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಿದ್ದು. ಈ ಪೈಕಿ ಕರ್ನಾಟಕದ ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳು ಸೇರಿವೆ.
ಈ ಪ್ರದೇಶಗಳ ಅಭಿವೃದ್ಧಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ದಾವಣಗೆರೆ ಡಾ.ಎಸ್.ಮಂಜಪ್ಪ ನಿರ್ದೇಶಕರು ಸಹ್ಯಾದ್ರಿ ಎಂಜಿನಿ ಯರಿಂಗ್ ಕಾಲೇಜು ಮಂಗಳೂರು ಇವರನ್ನು ತಜ್ಞ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Read also : ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯ : ವಾಲ್ಮೀಕಿ ಶ್ರೀ ಅಭಿಮತ
ಡಾ.ಎಸ್.ಮಂಜಪ ಅವರು ಈ ಹಿಂದೆಯೂ ಕೂಡ ಕೇಂದ್ರ ಕರಾವಳಿ ನಿಯಂತ್ರಣ ವಲಯ ಸಮಿತಿಯಲ್ಲಿ ಕೆಲಸ ಮಾಡಿದ ಅನುಭವವ ಹೊಂದಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
2025 ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಆಯ್ಕೆ ಸಮಿತಿಯ ಸದಸ್ಯರಾಗಿ ಕರ್ನಾಟಕ ರಾಜ್ಯದ ಪರವಾಗಿ ತಜ್ಞ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
