ದಾವಣಗೆರೆ : ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೊಂಡದ ರಸ್ತೆ ಶಾಖೆಯ ವತಿಯಿಂದ ಗ್ರಾಹಕರ ಸಭೆಯಲ್ಲಿ ಏರ್ಪಡಿಸಲಾಗಿತ್ತು.
ಜಿ.ಎಂ ಸಂಜೀವಪ್ಪ (ಎಚ್ ಓ) ಬ್ಯಾಂಕಿನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಆರ್ ಎಂ . ವರದರಾಯ ಕಾಮತ್ ಮಾತನಾಡಿ, ಬ್ಯಾಂಕಿನ ಡಿಜಿಟಲ್ ಸೇವೆಗಳ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಸಾಲಗಳ ಬಗ್ಗೆ ವಿವರವಾಗಿ ತಿಳಿಸಿದರು.
ಪಿಎಂಜೆಜೆಬಿವೈ ವಿಮಾ ಪಲಾನುಭವಿಗೆ / ವಾರಸುದಾರರಿಗೆ ಬ್ಯಾಂಕಿನ ವತಿಯಿಂದ 2.00 ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು.
1.25 ಕೋಟಿಯಷ್ಟು ಮೊತ್ತದ ಗೃಹಸಾಲವನ್ನು ಸಹ ಮಂಜೂರು ಮಾಡಲಾಯಿತು.
Read also : 35 ಮೆಕ್ಕೆಜೋಳ ಖರೀದಿ ಕೇಂದ್ರ: ಡಿಸ್ಟಿಲರಿಗಳಿಂದ 15,747, ಕುಕ್ಕುಟ ಉದ್ಯಮದಿಂದ 10,465 ಮೆಟ್ರಿಕ್ ಟನ್ ಬೇಡಿಕೆ
ಹಿರಿಯ ವ್ಯವಸ್ಥಾಪಕ ವಿಜಯ್ ಕುಮಾರ್, ಕರಿಬಸಪ್ಪ ದಪ್ಪೇರ, ಶಾಖಾ ವ್ಯವಸ್ಥಾಪಕ ಮಧುಸೂದನ, ಸಿಬ್ಬಂದಿಗಳಾದ ಮಂಜುನಾಥ್, ಬಸವಂತಪ್ಪ, ಶಿವಣ್ಣ ಹಾಗೂ ಶಾಖೆಯ ಗ್ರಾಹಕರು ಭಾಗವಹಿಸಿದ್ದರು.
