Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ ಮಹಾನಗರ ಪಾಲಿಕೆ | ನ.27 ರಿಂದ 30 ರವರೆಗೆ 69 ನೇ ಕನ್ನಡ ರಾಜ್ಯೋತ್ಸವ : ಮೇಯರ್ ಚಮನಸಾಬ್
ತಾಜಾ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ | ನ.27 ರಿಂದ 30 ರವರೆಗೆ 69 ನೇ ಕನ್ನಡ ರಾಜ್ಯೋತ್ಸವ : ಮೇಯರ್ ಚಮನಸಾಬ್

Dinamaana Kannada News
Last updated: November 26, 2024 1:01 pm
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere) : ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡ ಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಮಹಾನಗರ ಪಾಲಿಕೆ ಅವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಇದೇ ನ.27 ರಿಂದ 30 ರವರೆಗೆ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ  ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮೇಯರ್ ಚಮನಸಾಬ್ ತಿಳಿಸಿದರು.

ಪಾಲಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.27 ರಂದು 10 ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳಿಸಿದ ಮತ್ತು ಪಿಯುಸಿಯಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಭಿನಂದಿಸುವರು. ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಲುಮನೆ, ಉರ್ ಬಾನು, ಆಶಾ ಡಿ.ಎಸ್., ಸುಧಾ ಮಂಜುನಾಥ ಇಟ್ಟಿಗುಡಿ ಹಾಗೂ ವಿಪಕ್ಷ ನಾಯಕ ಪ್ರಸನ್ನಕುಮಾರ್, ಆಯುಕ್ತೆ ರೇಣುಕಾ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ದಿ.ಕಂಚಿಕೇರಿ ಶಿವಣ್ಣನವರ ಶ್ರೀ ಜಯಲಕ್ಷ್ಮ ನಾಟಕ ಸಂಘದಿಂದ ಕನ್ನಡ ನಾಟಕೋತ್ಸವ ಆಯೋಜಿಸಲಾಗಿದೆ. ಮುದುಕನ ಮದುವೆ, ಕಳ್ಳ ಗುರು ಸುಳ್ಳ ಶಿಷ್ಯ, ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನಗೊಳ್ಳಲಿವೆ.
ನ.28 ರಂದು ಬೆಳಗ್ಗೆ 9.30 ಕ್ಕೆ ಪಾಲಿಕೆ ಅವರಣದಲ್ಲಿ ಕನ್ನಡ ಧ್ವಜಾರೋಹಣ ಮೇಯರ್ ಚಮನಸಾಬ್ ಮಾಡುವರು. ಪಾಲಿಕೆಯ ಅವರಣದಿಂದ ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ಮೆರವಣೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಮಂಗಳೂರಿನ ವಿಶ್ವಪರ್ಯಟನಾಗಾರ ಮಹಮದ್ ಸಿನಾನ್, ಸೇರಿದಂತೆ ಉಪಮೇಯರ್ , ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತೆ ರೇಣುಕಾ, ವಿಪಕ್ಷ ನಾಯಕ ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಭಾಗವಹಿಸುವರು.

ಸಂಜೆ ಕಾರ್ಯಕ್ರಮದ ಉದ್ಘಾಟನೆ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು, ಸಾನಿಧ್ಯವನ್ನು ಹೆಬ್ಬಾಳ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿಜೀ, ಮುಸ್ಲಿಂ ಧರ್ಮ ಗುರು ಜೈನೀ ಕಾಮಿಲ್ ಸಖಾಫಿ, ಕ್ರೈಸ್ತ ಧರ್ಮಗುರು ಆಂಟೋನಿ ನಜರತ್ ಸಾನಿಧ್ಯ ವಹಿಸುವರು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿಶೇಷ ಉಪನ್ಯಾಸ ನೀಡುವರು. ಶಾಸಕ ಕೆ.ಎಸ್.ಬಸವಂತಪ್ಪ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಹಾಸ್ಯ ನಟ ಸಾಧುಕೋಕಿಲ, ಕನ್ನಡ ಪರ ಸಂಘಟನೆಗಳ ಕೆ.ಜಿ.ಯಲ್ಲಪ್ಪ, ಅವಿನಾಶ, ನಾಗೇಂದ್ರ ಬಂಡಿಕರ್, ಎನ್.ಹೆಚ್.ಹಾಲೇಶ್, ದ್ರಾಕ್ಷಾಯಣಮ್ಮ ಮಲ್ಲಿಕಾರ್ಜುನಯ್ಯ, ಸುವರ್ಣಮ್ಮ ಸೇರಿದಂತೆ ಇತರರು ಉಪಸ್ಥಿತರಿರುವವರು.

ಭಾರತಿ ಮ್ಯೂಸಿಕಲ್ ನೈಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ. ರಾತ್ರಿ 8 ಕ್ಕೆ ಸಾಧಕೋಕಿಲ ಮತ್ತು ಗಿಚ್ಚಿಗಿಲಿಗಿಲಿ ತಂಡದಿಂದ ಗೂಬ್ರಗಾಲ ಮಂಜು ಮತ್ತು ಜಗ್ಗಪ್ಪ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ನ.29 ಸಂಜೆ 5.30 ರ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು.ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಉಪನ್ಯಾಸ ನೀಡುವರು. ಅತಿಥಿಗಳಾಗಿ ಎಸ್ಪಿ ಉಮಾಪ್ರಶಾಂತ, ಪತ್ರಕರ್ತರಾದ ಬಸವರಾಜ ದೊಡ್ಮನಿ, ತೇಜಸ್ವಿನಿ , ಕನ್ನಡ ಪರ ಸಂಘಟನೆಯ ಎಂ.ಎಸ್.ರಾಮೇಗೌಡ, ಜಮ್ಮಳ್ಳಿ ನಾಗರಾಜ, ಶಾಂತಮ್ಮ ಇತರರು ಭಾಗವಹಿಸವರು.

ಜಾಂಬೆ ಬಾಲು ತಂಡದವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜಾಂಬೆ ಜಲಕ್ ಜಾನಪದ ಗೀತೆಗಳು. ಸಂಗೀತ ಕಟ್ಟಿ ತಂಡದಿಂದ ಕರ್ನಾಟಕ ಗೀತ ವೈಭವ ಮತ್ತು ಜೂನಿಯರ್ ವಿಷ್ಣುವರ್ಧನ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ ಎಂದರು.
ನ.30 ರ 5.30 ಸಂಜೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಉದ್ಘಾಟಿಸುವರು. ದಾವಣಗೆರೆ ನಗರದ ಅಮೃತ ಪುರುಷರಾದ ಶಾಸಕ ಶಾಮನೂರು ಶಿವಶಂಕರಪ್ಪ, ದಾನಿಗಳಾದ ಚನ್ನಗಿರಿ ವಿರುಪಾಕ್ಷಪ್ಪ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಡಾ.ಎಂ.ಎಸ್.ಎಲಿ, ರೈತ ಹೋರಾಟಗಾರ ನರಸಿಂಹಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕೆ.ಇಮಾಂ ಅವರಿಗೆ ನಾಗರೀಕ ಪೌರ ಸನ್ಮಾನ ನಡೆಯಲಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜ, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ನಟ ಡಾಲಿ ಧನಂಜಯ, ಜಿಲ್ಲಾ ಕಾ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕನ್ನಡ ಪರ ಸಂಘಟನೆಗಳ  ಟಿ.ಶಿವಕುಮಾರ್, ಕೆ.ಜಿ.ಶಿವಕುಮಾರ್,  ಮಂಜುಳಾ ಜಿ ಭಾಗವಹಿಸವರು.
ನ.28 ಮತ್ತು 29 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಅಂತರಾಷ್ಟ್ರೀಯ ಕ್ರೀಡಾಪಟು ಜೆ.ಎನ್.ಶ್ರೀನಿವಾಸ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ. ಕಾರ್ಯಕ್ರಮದ ನಂತರ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಲುಮನೆ, ಉರ್ ಬಾನು, ಆಶಾ ಡಿ.ಎಸ್., ಸುಧಾ ಮಂಜುನಾಥ ಇಟ್ಟಿಗುಡಿ, ಪಾಲಿಕೆ ಸದಸ್ಯ ಎ.ನಾಗರಾಜ, ಗಡಿಗುಡಾಳ ಮಂಜುನಾಥ ಇತರರು ಇದ್ದರು.

Read also : Davangere | ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಪ್ರಯತ್ನದಿಂದ ಮೂರು ಕ್ಷೇತ್ರಗಳಲ್ಲಿ ಗೆಲವು  

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Abdul Ghani Tahir appointed to State Waqf Council Davangere | ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಪ್ರಯತ್ನದಿಂದ ಮೂರು ಕ್ಷೇತ್ರಗಳಲ್ಲಿ ಗೆಲವು  
Next Article Davanagere Davanagere | ರೈತ ಮುಖಂಡರ ಸತ್ಯಾಗ್ರಹ ಬೆಂಬಲಸಿ ರಾಷ್ಟ್ರಪತಿಗಳಿಗೆ ಮನವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಗಣಿಗಾರಿಕೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಗಳು ಬಂದರೆ ಸಮಸ್ಯೆಗಳು ಉಲ್ಭಣಿಸುತ್ತವೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ/ ಬೆಂಗಳೂರು (Davanagere): ಗಣಿಗಾರಿಕೆಯ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ…

By Dinamaana Kannada News

ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರು ಗ್ಯಾರಂಟಿ ಯೋಜನೆಗಳ ಹಕ್ಕುದಾರರು

ದೇವನಹಳ್ಳಿ ಮಾ 11: ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಓಟಿಗೆ ಗೌರವ ತಂದುಕೊಟ್ಟವರು ನಾವು. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆಯಾ…

By Dinamaana Kannada News

ನ್ಯಾಮತಿ ಎಸ್‍ಬಿಐ ದರೋಡೆ ಪ್ರಕರಣ : 17.5 ಕೆಜಿ ಚಿನ್ನಾಭರಣ ವಶಕ್ಕೆ, ಆರೋಪಿಗಳ ಸೆರೆ

ದಾವಣಗೆರೆ (Davanagere) : ನ್ಯಾಮತಿ ಪಟ್ಟಣದ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸರುವ ದಾವಣಗೆರೆ ಪೊಲೀಸರು 13 ಕೋಟಿ ರೂ.…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?