ದಾವಣಗೆರೆ. ಫೆ.11 (Davanagere); ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆಯಿಂದ ಹೊಳಲ್ಕೆರೆವರೆಗೆ ಇದ್ದು NH 369 ಬಳಿ ಮುಕ್ತಾಯಗೊಂಡಿದೆ.ಇದೇ ಹೆದ್ದಾರಿಯನ್ನು ಹೊಳಲ್ಕೆರೆಯಿಂದ ಚಿಕ್ಕಜಾಜೂರಿನ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿ 47 ನ ಆನಗೋಡು ಸಮೀಪದ NH 48 ವರೆಗೆ ಮೇಲ್ದರ್ಜೆಗೇರಿಸಲು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನವದೆಹಲಿಯ ಸಂಸತ್ ನ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಸಂಸದರು ಇದನ್ನು ಮೇಲ್ದರ್ಜೆಗೇರಿಸುವುದರಿಂದ ಪ್ರಮುಖ ಮಾರ್ಗಗಳಿಗೆ ಪ್ರವೇಶವನ್ನು ಸುಗಮಗೊಳಿಸುವುದರೊಂದಿಗೆ ಮಧ್ಯ ಕರ್ನಾಟಕದ ಪ್ರಮುಖ ಖನಿಜ,ಅಡಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬಂದರು ನಾಡಾದ ಮಂಗಳೂರಿಗೆ ಸಂಪರ್ಕಿಸುತ್ತದೆ ಜೊತೆಗೆ ರಫ್ತು ಮಾಡಲು ಉತ್ತೇಜನ ದೊರಕಿದಂತಾಗುತ್ತದೆ.
ಈ ಮಾರ್ಗದ ಪ್ರಾಮುಖ್ಯತೆಯನ್ನು ಮನಗಂಡ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಮನ ಸೆಳೆದಿದ್ದಾರೆ.