Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ರಾಜ್ಯದ ಮೇಲೆ‌ 3D ನೀತಿ ಅನುಸರಿಸಿದ ಕೇಂದ್ರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪ 
ತಾಜಾ ಸುದ್ದಿ

ರಾಜ್ಯದ ಮೇಲೆ‌ 3D ನೀತಿ ಅನುಸರಿಸಿದ ಕೇಂದ್ರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪ 

Dinamaana Kannada News
Last updated: February 12, 2025 12:23 pm
Dinamaana Kannada News
Share
Davanagere
Davanagere
SHARE
ದಾವಣಗೆರೆ/ನವದೆಹಲಿ (Davanagere): ಕೇಂದ್ರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ತೆರಿಗೆ ನೀಡುವ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಲ್ಲಿ ದೊರೆತಿದ್ದು ಮಾತ್ರ ಅತ್ಯಲ್ಪ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ “3D” ನೀತಿ ಅಂದರೆ Discriminate (ತಾರತಮ್ಯ),Delay (ವಿಳಂಬ), Deny (ನಿರಾಕರಿಸು) ತೋರಿಸಿದೆ ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್  ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ನವದೆಹಲಿಯ ಸಂಸತ್ ನ ಬಜೆಟ್ ಅಧಿವೇಶನದ ಚರ್ಚೆಯ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ “ಸಬ್ ಕಾ ಸಾಥ್ ಸಬ್ ಕಾ‌ ವಿಕಾಸ್” ಎಂಬ ಭರವಸೆ ನೀಡಿದರೂ, ವಾಸ್ತವದಲ್ಲಿ ಇದು “ಕೆಲವರ ಜೊತೆ ಕೆಲವರ ಸಾಥ್ ಅಭಿವೃದ್ಧಿ ಎನ್ನುವಂತಾಗಿದೆ. ಕೇಂದ್ರ ವಿತ್ತ ಸಚಿವರು “ಮಧ್ಯಮವರ್ಗದ ಧ್ವನಿಯನ್ನು ಕೇಳಿದ್ದೇನೆ” ಎಂದು ಹೇಳುತ್ತಾರೆ. ಆದರೆ 2023-24ನೇ ಹಣಕಾಸು ವರ್ಷದಲ್ಲಿ ಕೇವಲ 6.68% ಜನರು ಮಾತ್ರ ಆದಾಯ ತೆರಿಗೆ ಸಲ್ಲಿಸಿದ್ದಾರೆ. ಭಾರತದ ಜನಸಂಖ್ಯೆ 142 ಕೋಟಿ.ಹೀಗಿದ್ದಾಗ ಹಣಕಾಸು ಸಚಿವರು ಯಾವ ಮಧ್ಯಮವರ್ಗದ ಬಗ್ಗೆ ಮಾತನಾಡುತ್ತಿದ್ದಾರೆ? ದಿನಕ್ಕೆ ₹100ಕ್ಕೂ ಕಡಿಮೆ ಆದಾಯವಿರುವ ಬಡವರಿಗೆ ಏನಾದರೂ ಪರಿಹಾರವಿದೆಯಾ ಎಂದು ಸಂಸದರು ಪ್ರಶ್ನಿಸಿದ್ದಾರೆ.
ಪದವೀಧರ ನಿರುದ್ಯೋಗದ ಪ್ರಮಾಣ 29.1% ಇದೆ, ಇದು ಇತ್ತೀಚಿನ ಇತಿಹಾಸದಲ್ಲೇ ಅತಿ ಹೆಚ್ಚು. 2024ರ ಜೂನ್‌ನಲ್ಲಿ ನಿರುದ್ಯೋಗದ ಪ್ರಮಾಣ 9.2% ಏರಿಕೆಯಾಯಿತು.2014ರಿಂದ, ನೈಜ ವೇತನ (real wage growth) ಕುಸಿದಿದೆ. ಕೃಷಿ ಕಾರ್ಮಿಕರ ವೇತನ ಕೇವಲ 0.8% ಏರಿಕೆಯಾಗಿದೆ, ಅನೌಪಚಾರಿಕ ವಲಯದಲ್ಲಿ 0.2% ಮಾತ್ರ, ಹಾಗೂ ಕಟ್ಟಡ ಕಾರ್ಮಿಕರಿಗೆ ಅತ್ಯಲ್ಪ ವೇತನವಿದೆ. ಸರ್ಕಾರಿ ಬ್ಯಾಂಕುಗಳು ಶ್ರೀಮಂತರಿಗೆ ಕಳೆದ 5 ವರ್ಷಗಳಲ್ಲಿ ₹9.90 ಲಕ್ಷ ಕೋಟಿ  ಸಾಲ ಮನ್ನಾ ಮಾಡಿವೆ ಇದು ವಿಕಸಿತ ಭಾರತವೇ?
ಇನ್ನು ಗೃಹ ಸಾಲ ಮತ್ತು ನಿರ್ವಹಣಾ ಸಾಲಗಳ ಪ್ರಮಾಣ GDPನ 39% ತಲುಪಿದೆ, ಜನಸಾಮಾನ್ಯರು ಸಾಲದ ಹೊರೆ ಹೊತ್ತಿದ್ದಾರೆ.2015 ರಿಂದ 2024ರ ಅವಧಿಯಲ್ಲಿ 24 ಲಕ್ಷ ಚಿಕ್ಕ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ.
ವಿಕಸಿತ ಭಾರತ ಎಂಬ ಪರಿಕಲ್ಪನೆ ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ.ನಬಾರ್ಡ್ ನ ಅನುದಾನವನ್ನು ಶೇ 58 ಕಡಿತ ಮಾಡಲಾಗಿದೆ, ಸಹಕಾರ ಬ್ಯಾಂಕುಗಳ ಸ್ಥಿತಿ ಶೋಚನೀಯವಾಗಿದೆ. ರೈತರ ನೆರವಿಗಾಗಿ ಸರ್ಕಾರ ಯಾವುದೇ ಸಹಾಯ ಮಾಡುತ್ತಿಲ್ಲ. ಎಂಎಸ್ ಪಿ ಕಾನೂನಾಗಿ ಘೋಷಣೆ ಮಾಡದಿರುವುದರಿಂದ, ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ.  2025-26ನೇ ಹಣಕಾಸು ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ₹99,858 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಬಹಳ ಕಡಿಮೆ.ಭಾರತದ ಆರೋಗ್ಯ ವ್ಯಯ GDPನ ಕೇವಲ 2% ಮಾತ್ರ.ವೈದ್ಯಕೀಯ ದರ ಏರಿಕೆ ಶೇ 14 ತಲುಪಿದೆ.  ಇದು ಏಷ್ಯಾದ ರಾಷ್ಟ್ರಗಳಲ್ಲೇ ಅತಿ ಹೆಚ್ಚು. ದೇಶದಲ್ಲಿರುವ ಆಸ್ಪತ್ರೆಗಳಲ್ಲಿನ ತುರ್ತು ವೈದ್ಯರ ಕೊರತೆಯ ಪ್ರಮಾಣ ಶೇ.79.5 ಇದೆ, ತಜ್ಞ ವೈದ್ಯರು 36 ಗಂಟೆಗಳ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.
ಕೇಂದ್ರ ಸರ್ಕಾರ “ಮಹಿಳಾ ಶಕ್ತೀಕರಣ” ಎಂದು ಘೋಷಿಸುತ್ತದೆಯಾದರೂ ಆಶಾ ಕಾರ್ಯಕರ್ತರಿಗೆ ಕೇವಲ ₹2,000 ವೇತನ ನೀಡಲಾಗುತ್ತಿದೆ.ಇದು ಮಹಿಳಾ ಸಬಲೀಕರಣವೆ? ಕರ್ನಾಟಕ ಸರ್ಕಾರ 2025ರ ಏಪ್ರಿಲ್ 1ರಿಂದ ಆಶಾ ಕಾರ್ಯಕರ್ತರಿಗೆ ₹10,000 ವೇತನವನ್ನು ಘೋಷಿಸಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಗಳಿಗೆ ಸಾವಿರಾರು ಕೋಟಿ ರಿಯಾಯಿತಿಗಳನ್ನು ನೀಡಿದರೂ, ಮಹಿಳಾ ಆರೋಗ್ಯ ಕಾರ್ಯಕರ್ತರ ಜೀವನೋಪಾಯಕ್ಕೆ ಕೇವಲ ₹2,000-₹4,000 ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಜೆಟ್ ಕೇವಲ ವೈಫಲ್ಯವಲ್ಲ, ಭಾರತದ ಕಾರ್ಮಿಕ ವರ್ಗ, ರೈತರು, ಮಹಿಳೆಯರು, ಯುವಕರು—ಎಲ್ಲರಿಗೂ ಮಾಡಿದ ದ್ರೋಹವಾಗಿದೆ.
ನಮ್ಮ ಕಾರ್ಮಿಕರ ಶಕ್ತಿಯನ್ನು ಕುಗ್ಗಿಸಿ, ನಮ್ಮ ರೈತರ ಆಶಯಗಳನ್ನು ತುಳಿದು, ನಮ್ಮ ಮಹಿಳೆಯರ ಸಮಾನತೆಯನ್ನು ನಿರಾಕರಿಸಿ, ನಮ್ಮ ಯುವಕರ ಭವಿಷ್ಯವನ್ನು ನಿರ್ಲಕ್ಷಿಸಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಜೆಟ್ ಕುರಿತು ಸಂಸತ್ ಸದನದಲ್ಲಿ‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Read also : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ
TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article davanagere ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ
Next Article davanagere Davanagere | ಅತ್ಯಾಚಾರಕ್ಕೆ ಸಹಕಾರ: ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ (Davanagere): ತಳ ಮಟ್ಟದಿಂದ   ಕಾಂಗ್ರೆಸ್ ಪಕ್ಷವನ್ನು ಪಕ್ಷ ಸಂಘಟನೆ ಮಾಡುವ ಮೂಲಕ ಬಲ ಪಡಿಸಿ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯು…

By Dinamaana Kannada News

Davanagere | 5 ಲಕ್ಷಕ್ಕೆ ಶಿಶು ಮಾರಾಟ : ವೈದ್ಯೆ ಸೇರಿ ಎಂಟು ಮಂದಿ ಬಂಧನ

ದಾವಣಗೆರೆ  (Davanagere ):  ನಕಲಿ ದಾಖಲೆ ಸೃಷ್ಟಿಸಿ 5 ಲಕ್ಷ ರೂ.ಗೆ ಶಿಶು ಮಾರಾಟ ಮಾಡಿರುವ ಜಾಲ ಭೇದಿಸಿರುವ ಜಿಲ್ಲಾ…

By Dinamaana Kannada News

Davanagere news | ಒಳಮೀಸಲು ಜಾರಿಗೊಳಿಸಲು ಮಾದಿಗ ಸಮುದಾಯದ ಮುಖಂಡರಿಂದ ಮನವಿ

ದಾವಣಗೆರೆ (Davanagere ):  ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ…

By Dinamaana Kannada News

You Might Also Like

arrest
ತಾಜಾ ಸುದ್ದಿ

crime news | ರೌಡಿಶೀಟರ್ ಕಣುಮನ ಕೊಲೆ ಪ್ರಕರಣ : 10 ಆರೋಪಿಗಳು ಆಂದರ್

By Dinamaana Kannada News
Lokayukta Davanagere
ತಾಜಾ ಸುದ್ದಿ

Lokayukta | ಒಳಚರಂಡಿ ಮಂಡಳಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Harihara | ರೈಲು ಗಾಡಿಗೆ ಸಿಲುಕಿ ವೃದ್ದೆ ಸಾವು

By Dinamaana Kannada News
Davanagere
ತಾಜಾ ಸುದ್ದಿ

Davanagere | ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?