ದಾವಣಗೆರೆ (Davanagere) : ರಾಜಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಮೂಲಕ ಜನರಲ್ಲಿ ಒಳಮೀಸಲಾತಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕ್ರಾಂತಿಕಾರಿ ರಥಯಾತ್ರೆ ಮೇ 17ರಂದು ದಾವಣಗೆರೆಗೆ ಆಗಮಿಸಲಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಬಸವರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ನೆಪ ಹೇಳಿ ಸರ್ಕಾರ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡುವ ಬದಲು ನುಣಿಚಿಕೊಳ್ಳುತ್ತಿದೆ. ಎಲ್ಲಾ ಪಕ್ಷಗಳು ನಮ್ಮ ಮಾದಿಗ ಸಮುದಾಯಕ್ಕೆ ಮೋಸ ಮಾಡಿವೆ. ಸರ್ಕಾರದಿಂದ ದತ್ತಾಂಶ ಸಿಗದಂತೆಯು ನೋಡಿಕೊಳ್ಳಲಾಗುತ್ತಿದೆ ಎನ್ನುವ ಅನುಮಾನ ದಟ್ಟವಾಗಿದೆ. ಒಳಮೀಸಲಾತಿ ಜಾರಿಯಾಗುವವರೆಗೂ ನಿಲ್ಲದ ಹೋರಾಟ ಜೂನ್ 9ಕ್ಕೆ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಸಂಘರ್ಷ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ಕ್ರಾಂತಿಕಾರಿ ರಥಯಾತ್ರೆಯು 17ರಂದು ರಾತ್ರಿ ದಾವಣಗೆರ ವಾಸ್ತವ್ಯ ಮಾಡಲಿದ್ದು, 18ರಂದು ಬೆಳಿಗ್ಗೆ 10.30 ರಿಂದ ದಾವಣಗೆರೆ ಗಾಂಧಿನಗರದ ಸರ್ಕಲ್‍ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ನಂತರ ಗಾಂಧಿನಗರದ ರಾಜಾ ಬೀದಿಗಳಲ್ಲಿ ಕ್ರಾಂತಿಕಾರಿ ರಥಯಾತ್ರೆ ಮೆರವಣಿಗೆ ನಡೆದು ನಂತರ ಗಾಂಧಿನಗರದ ಸರ್ಕಲ್ನಲ್ಲಿ ಸಭೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನ 1.30 ಕ್ಕೆ ಹದಡಿ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 2.30 ಕ್ಕೆ ಶಿರಮಗೊಂಡನಹಳ್ಳಿ ಮೆರವಣಿಗೆ ಸಭೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಹರಿಹರ ನಗರದ ಸರ್ಕಲ್ನಿಂದ ಮೆರವಣಿಗೆ ಸಭೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
Read also : ಸರ್ಕಾರಿ ಭೂಮಿಯಲ್ಲಿನ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
ಸಂಜೆ 5:30ಕ್ಕೆ ಮಲೆಬೆನ್ನೂರಿನಲ್ಲಿ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆದ ನಂತರ ಅಲ್ಲಿಂದ ಸಾಗಿ ರಾತ್ರಿ ಹೊನ್ನಾಳಿಯಲ್ಲಿ ವಾಸ್ತವ್ಯ ಹೂಡಲಿದೆ ಎಂದರು.
19 ರಂದು ಬೆಳಿಗ್ಗೆ 10:30ರಿಂದ ಹೊನ್ನಾಳಿ ಟಿ.ಬಿ ಸರ್ಕಲ್‍ನಿಂದ ಮೆರವಣಿಗೆಗೆ ನಡೆದು ಎ.ಕೆ.ಕಾಲೋನಿ, ಸಂಗೊಳ್ಳಿ ರಾಯಣ್ಣ ವೃತ್ತ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ಕ್ಕೆ ನ್ಯಾಮತಿ ಸುರಹೊನ್ನೆಯಿಂದ ಮೆರವಣಿಗೆ, ಮಧ್ಯಾಹ್ನ 2:30 ಕ್ಕೆ ಸಾಸ್ತೆಹಳ್ಳಿಯಿಂದ ಮೆರವಣಿಗೆ, ಸಂಜೆ 5-30 ಕ್ಕೆ ಚನ್ನಗಿರಿಯಿಂದ ಮೆರವಣಿಗೆ, ಎ.ಕೆ. ಕಾಲೋನಿ ಸಭೆ ಕಾರ್ಯಕ್ರಮ ರಾತ್ರಿ ಅಲ್ಲಿಯೇ ವಾಸ್ತವ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
20ರಂದು ಬೆಳಿಗ್ಗೆ 10:30 ಕ್ಕೆ ಸಂತೆಬೆನ್ನೂರು ಮೆರವಣಿಗೆ ಸಭೆ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಎಲೆಬೇತೂರು. ಬಿಳಿಚೋಡು ಮಾರ್ಗ ಸಂಜೆ 4:30 ಕ್ಕೆ ಜಗಳೂರು ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಮೆರವಣಿಗೆ, ಸಭೆ ಕಾರ್ಯಕ್ರಮ ಸಂಜೆ ಚಿತ್ರದುರ್ಗ ಕಡೆಗೆ ಸಾಗಲಿದೆ ಎಂದು ವಿವರಿಸಿದರು.
ಹೆಗ್ಗೆರೆ ರಂಗಪ್ಪ, ಡಿ.ಹನುಮಂತಪ್ಪ, ಎಸ್.ಹೆಚ್.ದೊಡ್ಡೇಶ್, ಹೆಚ್.ಸಿ.ಸಿದ್ದೇಶ್ ಬಾತಿ, ಮಲ್ಲೇಶ್ ಚಿಕ್ಕನಹಳ್ಳಿ, ನಾಗರಾಜ್ ಚಿಕ್ಕನಹಳ್ಳಿ, ನವಲೇಹಾಳು ಮಹಾಂತೇಶ್, ಗಣೇಶ್ ಇತರರು ಇದ್ದರು