ದಾವಣಗೆರೆ : ರಾಜ್ಯಾದ್ಯಂತ ಟೈರ್ ರಿಪೇರಿದಾರರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡುವ ಮೂಲಕ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಮಾಡಲು ಆದೇಶ ಮಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ದಾವಣಗೆರೆ ಜಿಲ್ಲಾ ಹಳೇ ಟೈರ್ ಮಾರಾಟಗಾರರ ಹಾಗೂ ರಿಪೇರಿದಾರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಅಧ್ಯಕ್ಷ ಸಮೀವಲ್ಲಾ, ಗೌರವಾಧ್ಯಕ್ಷರಾದ ಶೇಖ್ ಅಹಮದ್, ಜೆ.ಕೆ.ಕಲೀಲ್, ಕಾರ್ಯದರ್ಶಿ ಲಿಯಾಖತ್ ಆಲಿ, ಉಪಾಧ್ಯಕ್ಷ ಮಹಮದ್ ಆಲಿ, ಸದಸ್ಯರಾದ ಫಯಾಜ್ ಅಹಮದ್ ಎನ್.ಕೆ., ಸಲ್ಮಾನ್ , ಜಾಫರ್, ದಾದಾಪೀರ್, ನಿಸಾರ್ ಅಹಮದ್, ನೂರ್ (ಸ್ಟಾರ್) ಮಹಮದ್, ದಾದಾಪೀರ್ ಎಂ.ಕೆ., ಇರ್ಫಾನ್ ಆರ್.ಕೆ., ಅಬ್ದುಲ್ ಅಜೀಜ್ ಇತರರು ಇದ್ದರು.
Read also : ಮೈಸೂರು ಅಭಿವೃದ್ಧಿಗೆ 2578 ಕೋಟಿ : ದಲಿತ,ಅಹಿಂದ ವರ್ಗಕ್ಕೆ ಕೊಡುಗೆ ಶೂನ್ಯ