ದಾವಣಗೆರೆ : ಶಾಲೆ ಕೊಠಡಿಗೆ ಚಾವಣಿ ನಿರ್ಮಾಣಕ್ಕೆ ಗುತ್ತಿಗೆದಾರರಿಂದ ಲಂಚಪಡೆಯುವ ವೇಳೆ ಗ್ರಾಪಂ ಸದಸ್ಯರು ಹಾಗೂ ಒಬ್ಬ ನಿವಾಸಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯ ಶಾಲೆಯ ಕೊಠಡಿ ಚಾವಣೆ ನಿರ್ಮಿಸಲು ರ‍್ಕಾರದಿಂದ 2 ಲಕ್ಷದ ಕಾಮಗಾರಿಗೆ ಅನುಮೋದನೆ ನೀಡಿತ್ತು. ಈ ಕಾಮಗಾರಿ ಆರಂಭಿಸಲು ಗ್ರಾಪಂ ಸದಸ್ಯರಾದ ಶಿವಕುಮಾರ್, ಪ್ರದೀಪ ಗ್ರಾಮದ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರೆ, ಹಣ ಕೊಡಲು ನಿರಾಕರಿಸಿದ ಜಾವೀದ್ ಅಹಮದ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
Read also : ದಾವಣಗೆರೆ : ಜಾಕೀರ್ ಹುಸೇನ್ ಶಿವಮೊಗ್ಗ ವಕ್ಫ್ ನಿರೀಕ್ಷಕರಾಗಿ ಪದೋನ್ನತಿ
ದೂರು ಆಧರಿಸಿ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ, ಪಿಎಸ್‌ಐ ಸರಳಾ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು. 10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೂವರನ್ನು ವಶಕ್ಕೆ ಪಡೆದಿದ್ದಾರೆ ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ.
