ದಾವಣಗೆರೆ : ಇ- ಸ್ವತ್ತು ಮತ್ತು ಖಾತೆ ಬದಲಾವಣೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಪಲ್ಲಾಗಟ್ಟೆ ಪಿಡಿಓ ಶಶಿಧರ ಪಾಟೀಲ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಗಳೂರು ತಾಲೂಕಿನ ಸೊರಗೊಂಡನಹಳ್ಳಿ ಗ್ರಾಮದ ಆಶೋಕ ಎಂಬುವವರ ಮೂರು ಮನೆಗಳ ಇ-ಸ್ವತ್ತು ಮತ್ತು ಖಾತೆಗಳ ಬದಲಾವಣೆ ಮಾಡಿಕೊಡಲು ಪಿಡಿಓ ಶಶಿಧರ ಪಾಟೀಲ್ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದ್ದರಿಂದ ಆಶೋಕ ಪಾಟೀಲ್ ವಿರುದ್ದ ಕ್ರಮ ಕೈಗೊಳ್ಳಲು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧಾರಿಸಿ ತಮ್ಮ ಕಚೇರಿಯಲ್ಲಿ ಪಿಡಿಓ ಶಶಿಧರ ಪಾಟೀಲ್ ಲಂಚಪಡೆಯುವ ವೇಳೆ ಕಾರ್ಯಾಚರಣೆ ನಡೆಸಿ ಶಶಿಧರ ಪಾಟೀಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
Read also : ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಮೃತ
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕಲಾವತಿ, ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಹೆಚ್.ಗುರುಬಸವರಾಜ,ಪ್ರಭು ಬ ಸೂರಿನ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಲಿಂಗೇಶ, ಧನರಾಜ, ಮಂಜುನಾಥ, ಗೀರೀಶ, ಬಸವರಾಜ, ಚಾಲಕರಾದ ಬಸವರಾಜ, ರುದ್ರೇಶ್, ಸಂತೋಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.