ದಾವಣಗೆರೆ : ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಬದ್ಧತೆ ಹಾಗೂ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಸಾಮಥ್ರ್ಯ ಹೊಂದಿರಬೇಕೆಂದು ಕಿಷ್ಕಿಂಧಾ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಎನ್. ನಾಗಭೂಷಣ ಹೇಳಿದರು.
ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 2024-25 ನೇ ಬ್ಯಾಚ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಜ್ಞಾನ ಸಂಪಾದನೆ ಮತ್ತು ಹಂಚಿಕೊಳ್ಳುವಿಕೆ ಬದುಕಿನಲ್ಲಿ ಯಶಸ್ಸಿಗೆ ಅತ್ಯಂತ ಅಗತ್ಯವೆಂದು ಕಿವಿ ಮಾತು ಹೇಳಿದರು.
ಡಾ. ನಾಗಭೂಷಣ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರಲು ವಿದ್ಯಾರ್ಥಿಗಳು ಹೆಚ್ಚುವರಿ ಪ್ರಮಾಣಪತ್ರ ಕೋರ್ಸ್‍ಗಳನ್ನು ಮಾಡುವುದು ಅಗತ್ಯವಿದೆ ಎಂದು ಹೇಳಿದರು.
Read also : ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ : ನಿಯೋಗದಿಂದ ಹೈಕಮಾಂಡ್‌ಗೆ ದೂರು
ಅಕಾಡೆಮಿಕ್ ಡೀನ್ ಡಾ. ಕೆ. ಬಿ. ಪ್ರಕಾಶ್ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಗಣೇಶ್ ಡಿ. ಬಿ. ಅವರು 2024-25ನೇ ಸಾಲಿನ ಪದವಿ ಪ್ರದಾನ ವರದಿಮಂಡಿಸಿದರು.
ಮಾತನಾಡಿದ ರಿಲಯನ್ಸ್ ಜಿಯೋ ಉಪಾಧ್ಯಕ್ಷ ಹರ್ಷ ಎನ್.ಎಸ್., ಭವಿಷ್ಯದಲ್ಲಿ ಶ್ರೇಷ್ಠ ವೃತ್ತಿ ಮೌಲ್ಯಗಳನ್ನು ಅಳವಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದರು.
ಡಾ. ರಾಜನೀಶ್ ಮರಿಗೌಡರ್ ಸಂಯೋಜಿಸಿದರು. 283 ಕ್ಕೂ ಹೆಚ್ಚು ಪದವೀಧರ ವಿದ್ಯಾರ್ಥಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಅಧ್ಯಾಪಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
