ಹರಿಹರ : ನಗರದ ಜೆ.ಸಿ.ಬಡಾವಣೆ ಅಂಬೇಡ್ಕರ್ ಶಾಲಾ ಆವರಣದಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಹುಳ ಹತ್ತಿದ ಆಹಾರ ವಿತರಣೆ ಮಾಡುತ್ತಿದ್ದು ಸಂಬAಧಿತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕ ಆಗ್ರಹಿಸಿದೆ.
ಹಾಸ್ಟೆಲ್‌ನಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗಿನ 190ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಭಾನುವಾರ ಮತ್ತು ಶನಿವಾರದಂದು ಹುಳುಗಳಿರುವ ಅಕ್ಕಿಯಲ್ಲಿ ಮಾಡಿದ ಆಹಾರವನ್ನು ತಯಾರಿಸಿ ವಿತರಿಸಿದ್ದಾರೆ.
ಬಡಿಸಿದ ಆಹಾರದಲ್ಲಿ ಹುಳುಗಳನ್ನು ಕಂಡ ವಿದ್ಯಾರ್ಥಿನಿಯರಲ್ಲಿ ಹಲವರು ಊಟವನ್ನು ಮಾಡಿಲ್ಲ, ಅನಿವಾರ್ಯ ಎನಿಸಿದ ಹಲವು ಮಕ್ಕಳು ಹುಳುಗಳನ್ನು ತೆಗೆದುಆಹಾರ ಸೇವಿಸಿದ್ದಾರೆ.ಸೋಮವಾರದಂದು ಬೆಳಿಗ್ಗೆ ತಯಾರಿಸಿದ ತಿಂಡಿಯಲ್ಲೂ ಹುಳಗಳು ಕಂಡು ಬಂದಿದ್ದರಿAದ ತಿಂಡಿ ಸೇವಿಸದೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯರು ಅಳುತ್ತಿದ್ದನ್ನು ಗಮನಿಸಿದ ಮರುಗಿದ ವಿವಿಧ ಶಾಲೆಯ ಶಿಕ್ಷಕರು ಆ ವಿದ್ಯಾರ್ಥಿನಿಯರಿಗೆ ಬಿಸ್ಕಿಟ್ ಹಂಚಿದ್ದಾರೆ. ಇಷ್ಟೆ ಅಲ್ಲದೆ ಅರ್ಧ ಬೆಂದು ಒಂದು ಚಪಾತಿ, ಅನ್ನವನ್ನೂ ಹೊಟ್ಟೆ ತುಂಬ ನೀಡಲ್ಲ, ಬಿಸಿ ನೀರಿನ ತರಹ ಇರುವ ಚಹಾ ವಿತರಣೆ ಮಾಡುತ್ತಿದ್ದಾರೆ, ಕುಡಿಯುವ ನೀರಲ್ಲಿ ವಾಸನೆ ಇರುತ್ತದೆ, ಪ್ರಶ್ನೆ ಮಾಡಿದವರಿಗೆ ತಾರತಮ್ಯತೆ ಮಾಡುತ್ತಾರೆ, ಬಿಸಿ ನೀರು ಲಭ್ಯವಿಲ್ಲ, ಸಂಜೆಯ ಸ್ನಾಕ್ಸ್ ನಿಯತವಾಗಿ ನೀಡಲ್ಲ.
ಶೌಚಾಲಯಗಳಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗದೆಕಟ್ಟಿಕೊಂಡಿದ್ದು ಮೂಗು ಮುಚ್ಚಿಕೊಂಡು ಬಳಸಬೇಕಿದೆ ಎಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಮೌಖಿಕವಾಗಿ ದೂರಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಾರ್ಡನ್ ಹಾಸ್ಟೆಲ್‌ನಲ್ಲಿ ನಿಯಮಿತವಾಗಿಇರುವುದಿಲ್ಲ, ಈ ಹಿಂದೆಇವರು ಬೇರೆ ಹಾಸ್ಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗಲೂ ಇವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು.
Read also : ಉದ್ಯೋಗಾಧಾರಿತ ಡಿಪ್ಲೋಮಾ ಕೋರ್ಸ್‍ಗಳಿಗೆ ಪ್ರವೇಶ ಅರ್ಜಿ ಅಹ್ವಾನ
ಸರ್ಕಾರದಿAದ ಸಾಕಷ್ಟು ಅನುದಾನ ಬರುತ್ತಿದ್ದರೂ ಕೂಡ ಶುಚಿ, ರುಚಿಯಾದ ಆಹಾರ ನೀಡದೆ ವಿದ್ಯಾರ್ಥಿನಿಯರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವ ಇಲಾಖೆಯ ಸಂಬAಧಿತ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಂಘಟನೆಯು ಆಗ್ರಹಿಸುತ್ತದೆ.
ಹುಳುಭರಿತ ಆಹಾರ ವಿತರಣೆ ಬಗ್ಗೆ ಸಂಘಟನೆಯವರಿಗೆ ಮಾಹಿತಿ ನೀಡಿದ್ದಾರೆಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಇಲಾಖೆಯವರು ಕಿರುಕುಳ ಕೊಟ್ಟಲ್ಲಿ ಸಂಘಟನೆಯಿAದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದರ ಜೊತೆಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಕದಸಂಸಯ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್ ಎಚ್ಚರಿಸಿದ್ದಾರೆ.
