Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ​ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸನ್ನದ್ಧ: ಸಹಾಯವಾಣಿ ಸಂಖ್ಯೆ ಪ್ರಕಟ
ತಾಜಾ ಸುದ್ದಿ

​ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸನ್ನದ್ಧ: ಸಹಾಯವಾಣಿ ಸಂಖ್ಯೆ ಪ್ರಕಟ

Dinamaana Kannada News
Last updated: March 2, 2026 5:01 am
Dinamaana Kannada News
Share
District Collector G.M. Gangadharaswamy
SHARE
​ದಾವಣಗೆರೆ : ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಕರ್ನಾಟಕದ ಹಲವಾರು ಪ್ರಯಾಣಿಕರು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ, ದಾವಣಗೆರೆ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) ಹಾಗೂ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು (SEOC) 24×7 ಸಕ್ರಿಯಗೊಳಿಸಲಾಗಿದ್ದು, ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ.  ಇರಾನ್, ಇಸ್ರೇಲ್, ಲೆಬನಾನ್, ಯುಎಇ ಸೇರಿದಂತೆ ಹಲವು ದೇಶಗಳ ವಾಯುಪ್ರದೇಶವನ್ನು ಮಾರ್ಚ್ 2ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶವನ್ನು ಮರುಪರಿಶೀಲಿಸಲಾಗುವುದು.
​ಸಿಲುಕಿರುವ ಪ್ರಯಾಣಿಕರಲ್ಲಿ ಪ್ರಸ್ತುತ ರಾಜ್ಯದ ಒಟ್ಟು 200ಕ್ಕೂ ಹೆಚ್ಚು ಮಂದಿ ನೆರವಿಗಾಗಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಇವರಲ್ಲಿ ದಾವಣಗೆರೆ ಜಿಲ್ಲೆಯ 8 ಮಂದಿ ಯುಎಇ (ದುಬೈ) ನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಇವರೆಲ್ಲರೂ ಸುರಕ್ಷಿತವಾಗಿದ್ದಾರೆ.

Read also : Political analysis|ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್..

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಕೋಶ ಹಾಗೂ ದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದೆ. ಸ್ಥಳಾಂತರ ಪ್ರಕ್ರಿಯೆಗೆ ವಿಮಾನಯಾನ ಲಭ್ಯವಾದ ತಕ್ಷಣ ಮುಂದಿನ ಕ್ರಮ ವಹಿಸಲಾಗುವುದು.
​ಸಹಾಯವಾಣಿ ಸಂಖ್ಯೆಗಳು:
ಸಂಕಷ್ಟದಲ್ಲಿರುವವರು ಅಥವಾ ಅವರ ಕುಟುಂಬದವರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಬಹುದು:
​ದಾವಣಗೆರೆ ಜಿಲ್ಲಾ ಸಹಾಯವಾಣಿ: 08192-234034
​ರಾಜ್ಯ ಸಹಾಯವಾಣಿ: 080-22340676 / 1070
​ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು:
​ಯುಎಇ (ಟೋಲ್ ಫ್ರೀ): 800-46342, ವಾಟ್ಸಾಪ್: +971543090571
​ಸೌದಿ ಅರೇಬಿಯಾ (ರಿಯಾದ್): 00-966-11-4884697
​ಇಸ್ರೇಲ್: +972-54-7520711   
​ಮಧ್ಯಪ್ರಾಚ್ಯದಲ್ಲಿರುವ ಕನ್ನಡಿಗರು ಸ್ಥಳೀಯ ಸರ್ಕಾರಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಸಂಬಂಧಪಟ್ಟ ರಾಯಭಾರ ಕಚೇರಿಯ ‘ಸಾರಥಿ ಸಹಾಯತಾ’ (Sarthi Sahayata) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
Share This Article
Twitter Email Copy Link Print
Previous Article B S . yadeyarappa Political analysis|ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್..
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸಂವಿಧಾನ ಉಳಿಸಲು ಪಣ ತೊಡೋಣ : ಜಿಗ್ನೇಶ್ ಮೇವಾನಿ

ದಾವಣಗೆರೆ (Davanagere): ಬಾಬಾಸಾಹೇಬರ  ಸಮಾನತೆಯ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಕೆಲವರು ತೀರ್ಮಾನ ಮಾಡಿದ್ದಾರೆ,…

By Dinamaana Kannada News

Davanagere | ಪಾಲಿಕೆಯಿಂದ ನವೆಂಬರ್‌ನಲ್ಲಿ “ಕನ್ನಡ ಸ್ವಚ್ಚತಾ” ಮಾಸ : ಮಹಾಪೌರ ಚಮನ್‍ಸಾಬ್

ದಾವಣಗೆರೆ, ಅ. 24  (Davanagere) :  ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳನ್ನು ಕನ್ನಡ ಸ್ವಚ್ಛತಾ ಮಾಸವನ್ನಾಗಿ…

By Dinamaana Kannada News

ಬುದ್ಧ , ಬಸವ , ಅಂಬೇಡ್ಕರ್ ತ್ರಿವಳಿ ರತ್ನತ್ರಯರ ಆದರ್ಶ ಪಾಲಿಸಿ ; ಶಾಸಕ  ಕೆ.ಎಸ್.ಬಸವಂತಪ್ಪ

ದಾವಣಗೆರೆ (Davanagere) : ಗೌತಮಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಈ ಮೂರು ರತ್ನತ್ರಯರ ಆದರ್ಶಗಳನ್ನು ಪಾಲಿಸಿದಾಗ ಜೀವನದ ಮೌಲ್ಯ ಹೆಚ್ಚುತ್ತದೆ ಎಂದು…

By Dinamaana Kannada News

You Might Also Like

jagalore
ತಾಜಾ ಸುದ್ದಿ

ದುಬೈ ಪ್ರವಾಸ : ಜಗಳೂರು ತಾಲೂಕಿನ 15 ಜನ ಪ್ರವಾಸಿಗರು ಸುರಕ್ಷಿತ

By Dinamaana Kannada News
jagalore
ತಾಜಾ ಸುದ್ದಿ

ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ

By Dinamaana Kannada News
Davanagere
ತಾಜಾ ಸುದ್ದಿ

ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ

By Dinamaana Kannada News
Davanagere
ತಾಜಾ ಸುದ್ದಿ

ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್‌ಗೆ ಮಾದಿಗ ಸಂಘಟನೆಗಳ ಕರೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?