ದಾವಣಗೆರೆ (Davangere District) : ಬಂಗಾರ ಅಭರಣಗಳನ್ನು ಬಿಡಿಸುವ ನೆಪದಲ್ಲಿ ಬ್ಯಾಂಕಿಗೆ ಸಂಬಂಧಪಟ್ಟ ಆಭರಣಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 9 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.
ಅಜಯ್ ಕಂಚಿಕೆರೆ ಹಾಗು ಅಜಯ್ ಕುಮಾರ ಬಂಧಿತ ಆರೋಪಿಗಳು.
ಘಟನೆ ವಿವರ : ಅಜಯ್ ಕಂಚಿಕೇರಿ ದಾವಣಗೆರೆ ನಗರದ ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಯ್ಯ ಹೆಬ್ಬಳ್ಳಿಮಠ ಎಂಬುವವರ ಬಳಿ ಬಂದು ನಾವು ಇಂಡಲ್ ಮನಿ ಎನ್.ಬಿ.ಎಫ್.ಸಿ. ಯಲ್ಲಿ ಬಂಗಾರದ ಅಡಮಾನ ಸಾಲ ಪಡೆದಿದ್ದು, ಅಲ್ಲಿ ಬಡ್ಡಿ ಜಾಸ್ತಿ ಇರುವುದರಿಂದ ಆ ಸಾಲದ ಖಾತೆ ನಿಮ್ಮ ಬ್ಯಾಂಕಿಗೆ ಟೇಕ್ ಓವರ್ ಮಾಡಿಕೊಳ್ಳಿ ಎಂದು ಹೇಳಿ ನಂಬಿಸಿ ಫೆಡರಲ್ ಬ್ಯಾಂಕಿನಲ್ಲಿ ಎಸ್.ಬಿ. ಖಾತೆ ತೆರೆದು, ಫೆಡರಲ್ ಬ್ಯಾಂಕಿನಿಂದ ರೂ.7,20,000-00 ಜಮೆ ಮಾಡಿಸಿಕೊಂಡು ಹಣವನ್ನು ಇಂಡಲ್ ಮನಿ ಎನ್.ಬಿ.ಎಫ್.ಸಿ.ಯ ಸಾಲದ ಖಾತೆಗೆ ಜಮಾ ಮಾಡಿಸಿ ಅದೇ ದಿನ ದಿ.06-09-2024 ರಂದು ಬೆಳಿಗ್ಗೆ 11-30 ಗಂಟೆಗೆ ಮ್ಯಾನೇಜರ್ ಮಲ್ಲಯ್ಯ ಹೆಬ್ಬಳ್ಳಿಮಠ ಹಾಗೂ ಅವರ ಸಿಬ್ಬಂದಿಯು ಅಜಯ್ ಕಂಚಿಕೇರಿ ಅವರೊಂದಿಗೆ ಇಂಡಲ್ ಮನಿ ಎನ್.ಬಿ.ಎಫ್.ಸಿ.ಯಲ್ಲಿ ಬಂಗಾರವನ್ನು ತಮ್ಮ ವಶಕ್ಕೆ ಪಡೆಯಲು ಹೋದಾಗ ಅಜಯ್ ಕಂಚಿಕೇರಿ ಅವರು ಅಡಮಾನ ಮಾಡಿದ್ದ ಒಡವೆಗಳನ್ನು ಪಡೆದುಕೊಂಡಿದ್ದು ಅವರ ಜೊತೆ ಕರೆದುಕೊಂಡು ಬಂದಿದ್ದ ಅಜಯ್ ಎಂಬ ಇನ್ನೊಬ್ಬ ವ್ಯಕ್ತಿಯು ಆ ಒಡವೆಗಳನ್ನು ನೋಡುವುದಾಗಿ ಹೇಳಿ ಅಜಯ್ ಕಂಚಿಕೇರಿ ಇವರಿಂದ ಪಡೆದುಕೊಂಡು ಒಡವೆಗಳನ್ನು ಮ್ಯಾನೇಜರ್ ಇವರಿಗೆ ವಾಪಸ್ ಕೊಡದೇ ಮೋಸ ಮಾಡಿ ಅಲ್ಲಿಂದ ಓಡಿ ಹೋಗಿರುತ್ತಾರೆ ದೂರು ನೀಡಿದ್ದಾರೆ.
Read also : Davanagere | ಸಮಾಜ ಕಲ್ಯಾಣ ಇಲಾಖೆ ನೀಡುವ ಪ್ರೋತ್ಸಾಹಧನಕ್ಕಾಗಿ SSLC ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜು ರವರ ನೇತೃತ್ವದಲ್ಲಿ, ಪಿಎಸ್‍ಐ ಜಿ. ನಾಗರಾಜ, ಸಿಬ್ಬಂದಿ ಫಕೃದ್ದೀನ್ ಅಲಿ., ಬಿ.ಪಿ. ಗಿರೀಶ, ಸುರೇಶ ಒಳಗೊಂಡ ಒಂದು ತಂಡ ರಚನೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರು ಮತ್ತು ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಾಶಸ್ವಿಯಾದ ಬಸವನಗರ ಪೊಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ಗುರುಬಸವರಾಜ, ಪಿಎಸ್‍ಐ ಜಿ. ನಾಗರಾಜ, ಫಕೃದ್ದೀನ್ ಅಲಿ., ಬಿ.ಪಿ. ಗಿರೀಶ, ಸುರೇಶ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.