ದಾವಣಗೆರೆ : ಮನೆ ಕಳ್ಳತನಕ್ಕೆ ಹೊಂಚು ಹಾಕಿದ್ದ ತಂಡವನ್ನು ಹರಿಹರ ಪೊಲೀಸರು ಬಂಧಿಸಿದ್ದು ಆರೋಪಿತರಿಂದ 32.85 ಲಕ್ಷ ಮೊತ್ತದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ತಿಳಿಸಿದ್ದಾರೆ.
ಕಿರಣ ಗುಬ್ಬಿ (24), ಕೊಟ್ರೇಶ.ಸಿ.ಕೆ (22), ನಿತ್ಯಾನಂದ (24) ಶಿವರಾಜ್ 32 ಬಂಧಿತ ಆರೋಪಿಗಳು. ಪ್ರಕರಣದಲ್ಲಿನ ಇನ್ನೊಬ್ಬ ಆರೋಪಿ ಶಂಕರ್ ಗುಬ್ಬಿ ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಮಾಡುವ ತಂಡವೊಂದು ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಬಂದಿರುವ ಖಚಿತ ಮಾಹಿತಿ ಮೇರೆಗೆ ಡಿಸಿಆರ್‌ಬಿ ಹಾಗೂ ಹರಿಹರ ನಗರ ಠಾಣೆಯ ಸಿಬ್ಬಂದಿ ತಂಡ ರಚಿಸಿ ಆರೋಪಿತ ಪತ್ತೆಗೆ ಸೂಚಿಸಲಾಗಿತ್ತು. ಅದರಂತೆ ಹರಿಹರ ನಗರದ ವಿದ್ಯಾನಗರದ ಹೊರವಲಯದಲ್ಲಿ ಮನೆಗಳ್ಳತನಕ್ಕೆ ಹೊಂಚು ಹಾಕಿ ಆಗಮಿಸಿದ್ದ ಮನೆಗಳ್ಳತನ ಮಾಡುವ ತಂಡದ ನಾಲ್ವರನ್ನು ವಶಕ್ಕೆ ಪಡೆದು. ಹೆಚ್ಚಿನ ವಿಚಾರಣೆ ಮಾಡಿದಾಗ ಆರೋಪಿತರು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ನಗರದ ಜೆ.ಸಿ.ಬಡಾವಣೆಯಲ್ಲಿನ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ಹೇಳಿದರು.
ಆರೋಪಿತರಿಂದ 32,00,000/- ರೂ ಬೆಲೆಯ 434 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು, 40,000/-ರೂ ಬೆಲೆಯ 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ, 45,000/-ರೂ ಬೆಲೆಯ ಆಪಲ್ ಐಪೋನ್ ವಾಚ್ ಒಟ್ಟು- 32,85,000/-ರೂ ಬೆಲೆಯ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿತರ ಪತ್ತೆ , ಸ್ವತ್ತನ್ನು ವಶಪಡಿಸಕೊಳ್ಳುವಲ್ಲಿ ಯಶಸ್ವಿಯಾದ ತಂಡವನ್ನು ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಶ್ರೀಮಂಜುನಾಥ ಜಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್, ಪೊಲೀಸ್ ನಿರೀಕ್ಷಕ ಎಸ್. ದೇವಾನಂದ, ಡಿಸಿಆರ್ ಬಿ ಸಿಬ್ಬಂದಿಗಳಾದ ಮಜೀದ್ ಕೆ ಸಿ, ಆಂಜನೇಯ ಕೆ ಟಿ, ರಾಘವೇಂದ್ರ, ರಮೇಶ್ ನಾಯ್ಕ್, ಬಾಲಾಜಿ ಸಿ ಎಸ್ ರವರುಗಳು ಹಾಗೂ ಡಿವೈಎಸ್ಪಿ ಕಛೇರಿಯ ಎಎಸ್‌ಐ ಕರಿಬಸವರಾಜು, ತಿಮ್ಮೇಶ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು, ರಾಮಚಂದ್ರ ಜಾದವ್ ಮತ್ತು ಹರಿಹರ ಸಿಬ್ಬಂದಿಗಳಾದ ನಾಗರಾಜ್ ಸುಣಗಾರ, ರುದ್ರಸ್ವಾಮಿ, ಹೇಮ ನಾಯ್ಕ್, ರವಿ, ಸಿದ್ದೇಶ್, ಹನುಮಂತ ಗೋಪನಾಳ್, ಸತೀಶ್, ಚಾಲಕ ರಂಗನಾಥ ಇತರರು ಇದ್ದರು.