ದಾವಣಗೆರೆ (Davanagere) : ಯುವ ಸಮೂಹ ಧರ್ಮ -ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವಜನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕಲ್ಲು ಹೊಡೆಯುವುದು ತಪ್ಪು ಎಂದು ಎಲ್ಲರಿಗೂ ಗೊತ್ತು ಆದರೂ ಸಹ ಕಲ್ಲನ್ನು ಹೊಡೆದಿದ್ದಾರೆ. ಇದು ಒಳ್ಳೇಯ ಬೆಳವಣೆಗೆಯಲ್ಲ. ಗಲಾಟೆ ಮಾಡಿದವರಿಗೆ ಯಾವುದೇ ವಿನಾಯಿತಿ ಇಲ್ಲ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಚೋದನೆಗೆ ಒಳಗಾಗಿ ಚಿಕ್ಕ ವಯಸ್ಸಿನ ಮಕ್ಕಳು ಘಟನೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಇಂತಹ ಘಟನೆಗಳಲ್ಲಿ ಯಾರು ಸಹ ಭಾಗವಹಿಸಬಾರದರು ಎಂದರು.
ಧರ್ಮ – ಜಾತಿ ಎಂಬ ದ್ವೇಷ ಬಿಟ್ಟು ವಿಶ್ವಮಾನವರಾಗಬೇಕು. ಅನ್ಯ ಧರ್ಮಕ್ಕೆ ಯಾವುದೇ ರೀತಿಯಿಂದ ಧಕ್ಕೆ ತರಬಾರದು. ಏನಾದರು ಘಟನೆಗಳು ನಡೆದಾಗ ಕೂಡಲೇ ಪೊಲೀಸ್ ಠಾಣೆಗೆ ಕರೆಮಾಡಬೇಕು , ಪ್ರತಿ ಮೊಹಲ್ಲಾ, ಗ್ರಾಮ, ಬೀದಿಗಳಲ್ಲಿ ಯುವಜನ ಸಮಿತಿ ಸಭೆಯನ್ನು ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಧರ್ಮದಲ್ಲಿ ಕಲ್ಲನ್ನು ಹೊಡೆಯುವುದಾಗಲಿ ಅಥವಾ ಯಾವುದೇ ಧರ್ಮದ ಬಗ್ಗೆ ಪ್ರಚೋಚಧನೆ ಮಾಡುವುದಾಗಲಿ ಹೇಳುವುದಿಲ್ಲ. ಪ್ರತಿ ಧರ್ಮವು ಶಾಂತಿಯಿಂದ ಬಾಳುವುದನ್ನು ಹೇಳಿವೆ. ಗುಂಪು ಘರ್ಷಣೆಯಂತಹ ಪ್ರಕರಣಗಳು ನಡೆದಾಗ ಅಮಾಯಕರ ಮೇಲೆ ಪ್ರಕರಣ ದಾಖಲಿಸುವುದಿಲ್ಲಾ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿಯೇ ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ ಕೇಸು ಹಾಕುತ್ತೇವೆ ಎಂದರು .
ಇತ್ತೀಚಿಗೆ ಸಾರ್ವಜನಿಕರು ಸೈಬರ್ ಪ್ರಕರಣಗಳಿಗೆ ಒಳಗಾಗುತ್ತಿದ್ದು ಹೆಚ್ಚು ಜಾಗರೂಕತೆ ವಹಿಸಬೇಕು. ಇವತ್ತಿನ ದಿನಗಳಲ್ಲಿ ಎಲ್ಲರ ಬಳಿಯು ಮೊಬೈಲ್‌ಗಳಿದ್ದು ಯಾವುದೇ ಆನಾಮಧೇಯ/ಅನುಮಾನಸ್ಪದ ಲಿಂಕ್/ಮಸೇಜ್‌ಗಳು ಬಂದರೆ ಅವುಗಳನ್ನು ತೆರೆಯಬೇಡಿ ಇದರಿಂದ ವಂಚನೆಗೊಳಗಾಗುತ್ತೀರಿ. ಮಾದಕ ವಸ್ತು ಸೇವನೆ, ಗಲಾಟೆ, ಅಪರಾಧದಂತಹ ಚಟುವಟಿಕೆಗಳಲ್ಲಿ ಯುವಕರೇ ಹೆಚ್ಚು ಭಾಗಿಯಾಗುತ್ತಿರುವುದರಿಂದ ಯುವಜನ ಸಮಿತಿ ರಚನೆ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ದ್ವೇಷ, ಭಾವನೆಗಳಿಗೆ ದಕ್ಕೆ ತರುವಂತಹ ಹಾಗೂ ಪ್ರಚೋದನಕಾರಿ ಪೋಸ್ಟ್ ಹಾಕಬೇಡಿ. ಸಮಾಜದಲ್ಲಿ ಯಾವುದೇ ಭಾವನೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಗಾಂಧಿನಗರದ ಸುರೇಶ್ ಮಾತನಾಡಿ: ಇತ್ತೀಚಿನ ದಿನಗಳಲ್ಲಿ ಆದ ಗಲಾಟೆಯು ಭಾವುಟದಿಂದ ಪ್ರಾರಂಬವಾಗಿದ್ದು ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಈ ರೀತಿ ಮಾಡುವುದು ಸಮಾಜದ ಶಾಂತಿಯನ್ನು ಕದಡಿದಂತಾಗುತ್ತದೆ ಎಂದು ಹೇಳಿದರು.
Read also : Harihara news | ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಷ್ಕರ
ಮಾರುತಿ ಎಂಬುವವರು ಮಾತನಾಡಿ, ಯಾವುದೇ ಗಲಾಟೆ ಆದರೆ ಮೊದಲು ಕಲ್ಲನ್ನು ಹೊಡಿಬಾರದು ಮೊದಲು ನಾವು ಭಾರತೀಯವರು, ಯಾರಾದರೂ ನ್ಯೂಸೆನ್ಸ್ ಮಾಡಿದರೆ ಅಂತಹವರನ್ನು ಪೊಲೀಸ್‌ರವರಿಗೆ ಹಿಡಿದುಕೊಡಿ ನಾವೆಲ್ಲರೂ ಭಾರತೀಯರಾಗಿ ಇರಬೇಕು ಎಂದು ಹೇಳಿದರು.
ಪಾಲಿಕೆ ಸದಸ್ಯ ಶಿವಪ್ರಕಾಶ್ ಮಾತನಾಡಿ, ಗಲಾಟೆಯಾದಾಗ ಎಂಪಿ, ಎಂಎಲ್‌ಎ ಮಕ್ಕಳುಗಳು ಅರೆಸ್ಟ್ ಆಗಲ್ಲ. ಬಡವರ ಮಕ್ಕಳು ಮಾತ್ರ ಅರೆಸ್ಟ್ ಆಗಿರೋದು ಅವರಲ್ಲಿ 18-20 ವರ್ಷದ ಯುವಕರು, ಪ್ರಚೋದನೆಗೆ ಒಳಗಾಗಿ ಅಂತಹ ಕೆಲಸ ಮಾಡಬಾರದು, ಬಡವರ ಮಕ್ಕಳು ಹಾಳಾಗುವುದು ದುಡಿಮೆ ಮಾಡೋದು ಮೊದಲ ಕಾರ್ಯ ಆಗಿರಬೇಕು, ಮೊನ್ನೆ ನಡೆದ ಗಲಾಟೆಯಲ್ಲಿ ಅರೆಸ್ಟ್ ಆದ ಯುವಕರ ತಂದೆ-ತಾಯಿಗಳ ಅಳುತ್ತಿದ್ದಾರೆ. ಮನೆಗೆ ಮೊದಲು ಮಗ, ನಂತರ ಸಮಾಜಕ್ಕೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ , ಮಂಜುನಾಥ ಜಿ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕರಾದ ಲಕ್ಷ್ಮಣ್ ನಾಯ್ಕ್, ಗುರುಬಸವರಾಜ್, ಸುನೀಲ್ ಕುಮಾರ್, ಪ್ರಭಾವತಿ, ಮಲ್ಲಮ್ಮ ಚೌಬೆ, ಅಶ್ವಿನ್ ಕುಮಾರ್ ರವರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.