ದಾವಣಗೆರೆ : ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಣೆ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಟೂಲ್‍ಕಿಟ್ ವಿತರಣೆಗಾಗಿ ಸಾರ್ವಜನಿಕರಿಂದ davanagere.nicin ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಆದರೆ ಆಯ್ಕೆ ಮಾಡಿಸಿಕೊಡುತ್ತೇವೆ ಎಂದು ಯಾರೋ ಅಪರಿಚಿತ ವ್ಯಕ್ತಿಗಳು ಇಲಾಖೆಯ ಹೆಸರು ತಿಳಿಸಿ ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದು ಪಾವತಿ ಮಾಡಿರುವ ಅರ್ಜಿದಾರರೊಬ್ಬರಿಂದ ಇಲಾಖೆ ಗಮನಕ್ಕೆ ಬಂದಿರುತ್ತದೆ.
Read also : ದಾವಣಗೆರೆ : ಕಾಣಿಯಾದ ಮಕ್ಕಳ ಶೀಘ್ರವಾಗಿ ಪತ್ತೆಗೆ ಎಸ್ಪಿ ಸೂಚನೆ
ಇಲಾಖೆಯಿಂದ ಅರ್ಜಿಹಾಕಿದ ಫಲಾನುಭವಿಗಳಿಗೆ ಯಾವುದೇ ಕರೆ ಮಾಡುವುದಿದಲ್ಲ, ಅನಾಮಧೇಯ ಕರೆಗಳು ಅರ್ಜಿದಾರರಿಗೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಹತ್ತಿರ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕರು ತಿಳಿಸಿದ್ದಾರೆ.
