ದಾವಣಗೆರೆ : ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ. 14 ರಂದು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾಜ್ಯೋತಿ ಯೋಜನೆ ಅಡಿಯಲ್ಲಿ ಎಸ್.ಸಿ.ಎಸ್.ಟಿ. ಫ್ರತಿಭಾವಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾದ ಒಟ್ಟು 402 ವಿದ್ಯಾರ್ಥಿನಿಯರ ಪೈಕಿ 30 ವಿದ್ಯಾರ್ಥಿನಿಯರಿಗೆ ವಿದ್ಯಾರ್ಧಿ ವೇತನವನ್ನು ವಿತರಿಸಲಾಯಿತು.
ಇನ್ನುಳಿದ ವಿದ್ಯಾರ್ಥಿನಿಯರಿಗೆ ಆಯಾ ತಾಲ್ಲೂಕು ಮತ್ತು ಗ್ರಾಮಗಳ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಆಯಾ ತಾಲ್ಲೂಕು ಮತ್ತು ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿವೇತನ ಜಮಾ ಆಗಿರುವ ಪಾಸ್ ಬುಕ್ ಗಳನ್ನು ವಿದ್ಯಾರ್ಥಿನಿಯರಿಗೆ ನೀಡಲಾಯಿತು.
ಶಿಕ್ಷಣವನ್ನು ಉತ್ತೇಜಿಸಲು ಹಾಗೂ ವಂಚಿತ ಸಮುದಾಯದ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 5 ರಿಂದ 7 ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ರೂ. 3,000/- ಗಳನ್ನು ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ರೂ.5,000/- ಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.
Read also : ದಾವಣಗೆರೆ : ಎರಡು ದಿನ ಆಧುನಿಕ ಹೈನುಗಾರಿಕೆ ತರಬೇತಿ
ಪ್ರಾದೇಶಿಕ ಕಛೇರಿ ಡಿಜಿಎಂ ತನ್ಮಯದಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಷತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಯೋಜನಾ ನಿರ್ದೇಶಕಿ ರೇಷ್ಮ ಕೌಸರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿ ವಿತರಿಸಲಾಯಿತು.