ದಾವಣಗೆರೆ (Davanagere): ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿ ಲಭಿಸಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿರುವ ವಿಶಿಷ್ಟ ಪ್ರತಿಭಾನ್ವಿತ ಕ್ರಿಯಾಶೀಲ ಶಿಕ್ಷಕ-ಶಿಕ್ಷಕಿಯರನ್ನು ಹೊಂದಿ ಆತ್ಯುತ್ತಮ ಶೈಕ್ಷಣಿಕ ವಾತಾವರಣ ರೂಪಿಸಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶ ಪಡೆಯುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಪ್ರಜೆಗಳನ್ನು ರೂಪಿಸುತ್ತಾ ‘ಶಿಕ್ಷಣ ಸೇವೆಯೇ-ಸಮಾಜ ಸೇವೆ’ ಎಂದು ಪರಿಗಣಿಸಿ, ‘ಮೌಲ್ಯ ಶಿಕ್ಷಣ’ವನ್ನು ಪರಿಣಾಮಕಾರಿಯಾಗಿ ಬೋದನೆಯಲ್ಲಿ ಅಳವಡಿಸಿ, ವಿಶಿಷ್ಟ ರೀತಿಯಲ್ಲಿ ಶಾಲೆಯನ್ನು ಸಮಗ್ರವಾಗಿ ಸಾಧನೆಯ ಹಾದಿಯಲ್ಲಿ ಮುನ್ನೆಡೆಸುತ್ತಿರುವ ಆಡಳಿತ ಮಂಡಳಿಯ ಸೇವಾ ಕಾರ್ಯವೈಖರಿ ಗುರುತಿಸಿ ಬೆಂಗಳೂರಿನ ಹೆಸರಾಂತ ಶೈಕ್ಷಣಿಕ ಸಂಘಟನೆಯಾದ ಸೂರ್ಯ ಫೌಂಡೇಷನ್ ವತಿಯಿಂದ ಪ್ರತಿವರ್ಷ ಕೊಡ ಮಾಡುವ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿಯನ್ನು ನೀಡಲಾಗಿದೆ.
Read also : Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ. 23 ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಅ. 15 ರಂದು ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶಾಲೆಗೆ ‘ಶಿಕ್ಷಣ ಚೈತನ್ಯ -2024′ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ದಾವಣಗೆರೆ ಜಿಲ್ಲೆಗೆ ಅತ್ಯುತ್ತಮ ಶಾಲೆ ಎಂದು ಗೌರವ ಲಭಿಸಿದ ಪ್ರಯುಕ್ತ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಗುರುವೃಂದ ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.