ದಾವಣಗೆರೆ: ವ್ಯಕ್ತಿಗೆ ಕುರುಡತನ ಉಂಟಾಗಲು ಹಲವಾರು ಕಾರಣಗಳಿವೆ. ಅದರಂತೆ ಚಿಕಿತ್ಸಾ ವಿಧಾನಗಳು ಇವೆ. ಕಣ್ಣಿನ ರಕ್ಷಣೆ ಎಲ್ಲರಿಗೂ ಅಗತ್ಯ. ಕಾಲಕಾಲಕ್ಕೆ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಾಸನ್ ಐಕೇರ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಪೂರ್ಣಿಮಾ ಸಲಹೆ ನೀಡಿದರು.
ನಗರದ ವಾಸನ್ ಐಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಟೋ ಚಾಲಕರಿಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಕಣ್ಣುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಇಂತಹ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗುತ್ತವೆ. ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಾಜ್ಯದ ಎಲ್ಲಾ ವಾಸನ್ ಐಕೇರ್ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತç ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಕಣ್ಣಿನ ದೋಷ ಹೊಂದಿರುವ ೧೦ ಜನ ಆಟೋ ಚಾಲಕರಿಗೆ ಉಚಿತವಾಗಿ ಶಸ್ತç ಚಿಕಿತ್ಸೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಟೋ ಮತ್ತು ವಾಹನಗಳು ಚಾಲಕರು ಸೇರಿ ಸಾರ್ವಜನಿಕರು ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸುವ ಮೂಲಕವಾಗಿ ಕಣ್ಣುಗಳ ರಕ್ಷಣೆ ಕುರಿತು ಜಾಗೃತಿ ಮನೋಭಾವ ಬೆಳೆಸಿಕೊಳ್ಳಬೇಕು. ನೀವು ಪ್ರತಿನಿತ್ಯ ರಸ್ತೆಯ ಮೇಲೆ ಆಟೋಗಳನ್ನು ಚಲಾಯಿಸುವುದರಿಂದ ಕಣ್ಣುಗಳ ಆರೋಗ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕಣ್ಣುಗಳ ರಕ್ಷಣೆ ಪ್ರಮುಖವಾಗಿದೆ ಎಂದು ಹೇಳಿದರು.
ಡಾ.ದೀಪಕ್,ಡಾ.ಪೂಜಾ ಸೇರಿದಂತೆ ಅಸ್ಪತ್ರೆಯ ಸಿಬ್ಬಂದಿಗಳು ಇದ್ದರು.
