ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಎಫ್ ಐ ಡಿ ಹೊಂದಿದ ರೈತರಿದ್ದು ಈಗಾಗಲೇ 2,000 ರೈತರು ಇಕೆವೈಸಿ ಯನ್ನು ಮಾಡಿಸಿಕೊಂಡಿದ್ದಾರೆ. ರೈತರಲ್ಲಿ ಕೊನೆಯ ದಿನ ಮುಗಿಯಲಿದೆ ಎಂಬ ಆತಂಕ ವಿದ್ದು ಸರ್ಕಾರ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಿದೆ.
ಶ್ವೇತಾ , ಸಹಾಯಕ ನಿರ್ದೇಶಕಿಸರ್ಕಾರದ ಸೌಲಭ್ಯಗಳು ರೈತರಿಗೆ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಇಕೆವೈಸಿಯನ್ನು ಮಾಡಿಸುವಂತೆ ಸೂಚನೆ ನೀಡಿದೆ ಆದರೆ ರೈತರನ್ನು ಅಲೆದಾಡಿಸುವಂತೆ ಸೂಚನೆ ನೀಡಿಲ್ಲ ಸಕಾಲಕ್ಕೆ ರೈತರು ಕೆಲಸಗಳನ್ನು ಮಾಡಿಕೊಡುವುದು ಪ್ರತಿಯೊಬ್ಬ ಅಧಿಕಾರಿಗಳ ಆಧ್ಯ ಕರ್ತವ್ಯವಾಗಿದ ಎಂಬುದನ್ನು ಹರಿಯಬೇಕು.
ತಾಲೂಕು ರೈತ ಸಂಘದ ( ಹುಚ್ಚವ್ವನಹಳ್ಳಿ ಮಂಜುನಾಥ ) ಬಣದ ಗೌರವಾಧ್ಯಕ್ಷ ಗಂಗಣ್ಣ.
ಇಕೆವೈಸಿ ನೊಂದಾವಣಿಗೆ ರೈತರ ಪರದಾಟ:ರೈತ ಸಂಘದ ಗೌರವಾಧ್ಯಕ್ಷ ಗಂಗಣ್ಣ ದೂರು
ಜಗಳೂರು: ಇಕೆವೈಸಿ ನೊಂದಾವಣಿಗೆ ರೈತರ ಪರದಾಟ ನಡೆಸುತ್ತಿದ್ದು ರೈತರನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಕೃಷಿ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ( ಹುಚ್ಚವ್ವನಹಳ್ಳಿ ಮಂಜುನಾಥ ) ಬಣದ ಗೌರವಾಧ್ಯಕ್ಷ ಗಂಗಣ್ಣ ದೂರಿದರು.
ಪಟ್ಟಣದ ಕೃಷಿ ಇಲಾಖೆ ಆಗಮಿಸಿದವರು ಇಕೆ ವೈಸಿ ನೆಪದಲ್ಲಿ ರೈತರನ್ನು ಅಲೆದಾಡಿಸುವಂತ ಕೆಲಸ ಮಾಡುತ್ತಿದ್ದೀರಿ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ವೇತಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಎಫ್ ಐ ಡಿ ಹೊಂದಿರುವಂತ ರೈತರು ಇಕೆ ವೈಸಿಯನ್ನು ಮಾಡಿಸಿಕೊಂಡಿದ್ದಾರೆ ಆದರು ಸಹ ನೀವು ಮತ್ತೆ ಇ ಕೆ ವೈ ಸಿ ಯನ್ನು ಮಾಡಬೇಕೆಂದು ಹೇಳುತ್ತೀರಿ ಗ್ರಾಮೀಣ ಪ್ರದೇಶಗಳಿಂದ ರೈತರು ದೂರದ ಊರುಗಳಿಂದ ಕೃಷಿ ಕಾರ್ಯದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ತಾಲೂಕು ಕೇಂದ್ರಕ್ಕೆ ಬಂದು ಇಕೆವೈಸಿ ಮಾಡಲು ಅಲೆದಾಡುವಂತಾಗಿದೆ .
ರೈತ ಸಂಪರ್ಕ ಕೇಂದ್ರದಲ್ಲಿ ತಾಂತ್ರಿಕ ದೋಷವಿದೆ ಎನ್ನುತ್ತಾರೆ ಸಿಎಸ್ ಸಿ ಸೇವೇ ಕೇಂದ್ರ ,ಕರ್ನಾಟಕ ಒನ್ ಗೆ ಹೋದರೆ ಅಧಿಕ ಹಣ ಪಡೆಯುತ್ತಾರೆ. ಇಷ್ಟೊಂದು ಹಣವನ್ನು ರೈತರ ಪಾವತಿ ಮಾಡಲು ಸಾಧ್ಯವಾಗುತ್ತದೆಯೇ ಇಲಾಖೆಯಿಂದಲೇ ರೈತರಿಗೆ ಅನುಕೂಲವಾಗುವಂತಹ ನಿನ್ನಷ್ಟು ನೋಂದಾವಣೆ ಕೇಂದ್ರಗಳನ್ನು ತೆರೆದರೆ ಅನುಕೂಲವಾಗುತ್ತದೆ ಎಂದಾಗ,
ಸಹಾಯಕ ನಿರ್ದೇಶಕರಾದ ಶ್ವೇತ ಮಾತನಾಡಿ, ಪಟ್ಟಣದ ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚು ಹೊಸಕೆರೆ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೊಂದಾವಣೆಯನ್ನು ಮಾಡಲಾಗುತ್ತದೆ ಎಂದಾಗ ಆ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿದರು ಸಹ ಮತ್ತೆ ಜಗಳೂರಿಗೆ ಕಳಿಸುತ್ತಾರೆ ರೈತರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ಬಿಡಿ ಕೆಲಸವನ್ನು ಮಾಡಿಕೊಟ್ಟರೆ ಒಳಿತಾಗಲಿದೆ ಎಂದ ಅವರು ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
Leave a comment
