ದಾವಣಗೆರೆ : ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್‍ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‍ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ ಗಜಾನನ ತಂದೆ ರಾಮಪೂಜಾರಪ್ಪ ಇವರು ತಮ್ಮ ಸ್ನೇಹಿತರೊಂದಿಗೆ ಪಡೆದುಕೊಂಡು ಪ್ರತಿ ತಿಂಗಳು ಶೇಕಡಾ 5 ರಷ್ಟು ಲಾಭಾಂಶವನ್ನು ಕೊಡುವುದಾಗಿ ಹೇಳಿ ಕೆಲವು ತಿಂಗಳು ಕೊಟ್ಟು ನಂತರದ ದಿನಗಳಲ್ಲಿ ಲಾಭಾಂಶವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಒಟ್ಟು ಸಾರ್ವಜನಿಕರಿಂದ 31.50,000/- ರೂಗಳನ್ನು ಕಟ್ಟಿಸಿಕೊಂಡು 61.62.800/- ರೂ ಲಾಭಾಂಶದ ಹಣವನ್ನು ಜಮಾ ಮಾಡಿದ್ದು ರೂ.37,33,500ಗಳನ್ನು 6 ತಿಂಗಳ ಲಾಭಾಂಶದ ಹಣವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ ಎಂದು ಹರೀಶ.ಕೆ ತಂದೆ ಉಮೇಶಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ.
Read also : ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟ್‍ಗಳ ನೇಮಕಾತಿಗೆ ಅರ್ಜಿ ಆಹ್ವಾನ
ಠೇವಣಿದಾರರು ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ ಹೋಗಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆ, ಮೊದಲನೇ ಮಹಡಿ ವಿದ್ಯಾನಗರ ಪೊಲೀಸ್ ಇನ್ಸ್‍ಪೆಕ್ಟರ್ ರವರ ಬಳಿ ಹೋಗಿ ಮಾಹಿತಿ ನೀಡಬೇಕು. ದೂ.ಸಂ:08192-225119 ನ್ನು ಸಂಪರ್ಕಿಸಲು ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.