ಹರಿಹರ : ಹದಗೆಟ್ಟಿರುವ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಿದರು.
ಹರಿಹರ ತಾಲೂಕು ಅಧ್ಯಕ್ಷ ರಮೇಶ್ ಮಾನೆ ಮಾತನಾಡಿ, ನಗರದ ಬಹರ್ ಮಕಾನ್ ಮತ್ತು ಜೆ ಸಿ. ಬಡಾವಣೆ 1ನೇ ಮೇನ್ 4ನೇ ಕ್ರಾಸ್ ಹರಿಹರದ ಪ್ರಮುಖ ರಸ್ತೆಯಾಗಿದ್ದು ಪ್ರತಿದಿನ ಸಾವಿರಾರು ಮಕ್ಕಳು ಶಾಲಾ -ಕಾಲೇಜಿಗೆ ತೆರಳುತ್ತಾರೆ. ಇಲ್ಲಿನ ರಸ್ತೆ ಹದಗಟ್ಟಿರುವುದರಿಂದ ಮಕ್ಕಳು ಹಾಗೂ ವಾಹನ ಸವಾರರು ಪರದಾಡುತ್ತದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ ಶೀಘ್ರದಲ್ಲಿ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ , AEE ಆದ ತಿಪ್ಪೇಶಪ್ಪ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರಾದ ಸಂತೋಷ್ . ನಗರ ಘಟಕ ಅಧ್ಯಕ್ಷರಾದ ಪ್ರೀತಮ್ ಬಾಬು, ಆಟೋ ಚಾಲಕರ ಸಂಘದ ಗೌರವಧ್ಯಕ್ಷರಾದ ಸಿದ್ದಲಿಂಗಸ್ವಾಮಿ, ಪದಾಧಿಕಾರಿಗಳಾದ ಅಲಿ ಅಕ್ಬರ್, ಸಿರಾಜ್,ರಮೇಶ್ ಮಡಿವಾಳ, ಆಟೋ ರಾಜು,ಗಂಗಾಧರ್, ಚಂದ್ರಪ್ಪ ಮೇದಾರ್, ಆ ಭಾಗದ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.