ದಾವಣಗೆರೆ,ಫೆ.26 : ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ ಮತ್ತು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ -2025 ಕಾರ್ಯಕ್ರಮಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಬುಧವಾರ ಚಾಲನೆ ನೀಡಿದರು.
ಫಲಪುಷ್ಪ ಪ್ರದರ್ಶನವು ಮಾರ್ಚ್ 1 ರ ವರೆಗೆ ಒಟ್ಟು ಐದು ದಿನಗಳ ಕಾಲ ಜರುಗಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿ. ವಿಧಾನಸೌಧ” 42 ಅಡಿ ಉದ್ದ, 14 ಅಗಲ ಅಡಿ, 18 ಅಡಿ ಎತ್ತರದ ಕಲಾಕೃತಿಗಳನ್ನು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ. ಈ ಕಲಾಕೃತಿಗೆ 4 ಲಕ್ಷ ಸೇವಂತಿಗೆ ಹಳದಿ, ಬಿಳಿ, ನೇರಳೆ ಹೂವುಗಳಿಂದ ಶೃಂಗಾರ ಮಾಡಲಾಗಿದೆ.
ಹಂಪಿ ರಥ ವನ್ನು 10 ಅಡಿ ಉದ್ದ, 10 ಅಗಲ ಅಡಿ, 12 ಅಡಿ ಎತ್ತರದ ಕಲಾಕೃತಿ ರಚನೆ ಮಾಡಿ ಕಾಮಿನಿ ಎಲೆಗಳಿಂದ, 50 ಸಾವಿರ ಸೇವಂತಿಗೆ, 10 ಸಾವಿರ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. I ಐಔಗಿಇ ಆಂಗಿAಓAಉಇಖಇ 15 ಅಡಿ ಉದ್ದ, 7 ಅಡಿ ಎತ್ತರದ 10 ಸಾವಿರ ಸೇವಂತಿಗೆ ಹೂ ಮತ್ತು 50 ಸಾವಿರ ಕಾಮಿನಿ ಎಲೆಗಳಿಂದ ಶೃಂಗಾರ ಮಾಡಲಾಗಿದೆ.

ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಸಾಲುಮರದ ತಿಮ್ಮಕ್ಕ ರವರ ಸಾಧನೆಯ ಹಾದಿಗೆ ಪುಷ್ಪ ನಮನ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ 56 ಬಗೆಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಗಿಡಗಳು ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸಗಳ ಜೋಡಣೆ ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಆಂತ್ರಿಯ, ಡಾಲಿಯಾ, ಜೀನಿಯಾ, ಬೀಗೋನಿಯಾ, ಡಯಾಂಥಸ್, ಚೆಂಡು ಹೂವು, ಸೇವಂತಿಗೆ, ಸೆಲೋಸಿಯಾ, ಅರೆಕಾ ಪಾಮ್, ರಾಫಿಸ್ ಪಾಮ್, ಯುಜೀನಿಯಾ, ಫಿಕಸ್ ಪಾಂಡಾ, ಸ್ಟಾರ್ ಲೈಟ್, ಬೊಂಬೂ ಪಾಮ್, ಕ್ರೋಟಾನ್, ಅಗೋನೆಮಾ ಐಸ್, ಗೋಲ್ಡನ್ ಸೈಪ್ರೆಸ್, ಚಾಂಪಿಯನ್ ಪಾಮ್, ಇರಾ, ಪಿಚೋಡಿಯಾ ಪಾಮ್, ಫೀನಿಕ್ಸ್, ಡೈಫೆನ್‌ಬಾಚಿಯಾ, ಬುದ್ಧ ಬಂಬೂ ಸಾಂಗ್ ಅಫ್ ಜಾಮಿಕಾ, ಡ್ರಾಕೇನಾ ಫ್ರಾಗ್ರನ್ಸ್, ನೋಲಿನಾ ಪಾಮ್, ಬರಡ್ ಅಫ್ ಪ್ಯಾರಡೈಸ್, ರಾಡರ್ಮಾಚರಾ, ಕ್ಯಾಲಥಿಯಾ ಲುಥಿಯಾ, ಷಾಂಪೇನ್ ಪಾಮ್, ಚೈನಾ ಆರೆಂಜ್, ಕ್ಯಾಮೆಲಿಯಾ, ಇಟಾಲಿಯನ್ ಸೈಪ್ರೆಸ್, ಗೋಲ್ಡನ್ ಥುಜಾ, ಆರೆಂಜ್ ಟ್ರಂಪೆಟ್ ಕ್ರೀಪರ್, ಡ್ರಾಕೇನಾ ಆಲ್ ವೆರಿಟಿ, ಆಗೋನೆಮಾ ಸಿಲ್ವರ್, ರಿಯೋ, ಅರೆಲಿಯಾ (ಹಸಿರು, ಚಿನ್ನ), ಪಾಂಡನಸ್, ವೈಟ್ ರಿಬ್ಬನ್, ಕ್ರೋಟಾನ್, ಇಕ್ಕೋರಾ ಮಿನಿ, ಸೈಫೋರಾ, ನಂದಿ ಬಟು, ಎರಾಂಥೆಮಮ್, ಗಾಲ್ಮೀಮಿಯಾ, ಅಖಿಲಾಫಾ, ಡ್ರಾಕೇನಾ ಕೊಲೊರಾಮಾ, ಆತ್ಮರ್ನಾಂಥೆರಾ, ಸ್ಕೋ ಬುಸ್, ಆಕಾಲಿಸ್, ಪಾರ್ಟುಲಾಕಾ, ಮಧುಕಾಮಿನಿ, ಅಲಮಂಡಾ, ಯುಜೆನಿಯಾ, ನಿಕೋಟಿನಾ, ಜೋತ್ರವ, ಯುಫೋರ್ಬಿಯಾ ಮಿಲಿ ರೆಡ್, ಚೈತ್ರಮಾಲ ಬಳಸಲಾಗಿದೆ.

ಗಾಜಿನ ಮನೆಯ ಉದ್ಯಾನವನದ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಲಾಗಿದೆ, ಈ ಎಲ್ಲಾ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಿ ಕಾರ್ಯಕ್ರಮ ಸೊಬಗನ್ನು ಇಮ್ಮಡಿಗೊಳಿಸಲಾಗಿದೆ.
ಜಿಲೆಯ ಎಲ್ಲಾ ತಾಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ ಮತ್ತು ತೋಟದ ಬೆಳೆಗಳ ಉತ್ಪನ್ನಗಳ ಪ್ರದರ್ಶನದ ಜೊತೆಗೆ ಜಿಲ್ಲೆಯಲ್ಲಿ ಅಡಿಕೆ ಬೆಳೆಯೊಂದಿಗೆ ಅಂತರ ಬೆಳೆಗಳನ್ನು ಬೆಳೆದು ಮಾದರಿಯಾಗಿರುವ ರೈತರುಗಳ ವಿವರಣೆಗಳನ್ನು ಪ್ರದರ್ಶಿಸಲಾಗಿದೆ, ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಪ್ರತಿ ದಿನ ಸಾಯಂಕಾಲ ಸಂಗೀತ ಕಾರಂಜಿಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ.
ಪ್ರವೇಶ ಶುಲ್ಕವು ಪ್ರತಿ ದಿನದ ಸಂಗೀತ ಕಾರಂಜಿಯ ಪ್ರದರ್ಶನವಿರುವುದರಿಂದ ವಯಸ್ಕರಿಗೆ ರೂ. 30/- ಮತ್ತು ಮಕ್ಕಳಿಗೆ ರೂ.10/- ನಿಗದಿಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರ ವರೆಗೆ ವೀಕ್ಷಿಸಬಹುದಾಗಿದೆ.

ದಾವಣಗೆರೆ ಹಾಗೂ ಅಕ್ಕಪಕ್ಕದ ಎಲ್ಲಾ ಜಿಲ್ಲೆಗಳ ಸರ್ವ ರೈತಬಾಂಧವರು ಹಾಗೂ ಎಲ್ಲಾ ನಾಗರೀಕರು ತಮ್ಮ ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಈ ಫಲಪುಷ್ಪ ಪ್ರದರ್ಶನವನ್ನು ಯಶಸ್ವಿಗೊಳಿಸಲೂ ತೋಟಗಾರಿಕೆ ಜಂಟಿ ನಿರ್ದೇಶಕ ತಿಳಿಸಿದ್ದಾರೆ.
ಇದನ್ನೂ ಓದಿ : ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ರೈತರಿಂದ ಬೆಸ್ಕಾಂಗೆ ಮುತ್ತಿಗೆ
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ ,ಜಿಲ್ಲಾಧಿಕಾರಿ ಜಿ.ಎಂ ಗಂಗಾಧರ ಸ್ವಾಮಿ, ಸಿಇಒ ಗಿತ್ತೆ ಮಾಧವ ವಿಠಲರಾವ್, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
