ದಾವಣಗೆರೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2025 ರ ಅ.2 ರಂದು ಆಚರಿಸುವ ಮಹಾತ್ಮ ಗಾಂಧೀಜಿಯವರ 156 ನೇ ಜನ್ಮದಿನಾಚರಣೆ ಅಂಗವಾಗಿ ಯುವ ಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪøಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಸೇರಿದಂತೆ ಇತರೆ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲು ಗಾಂಧೀಜಿ ಕುರಿತಂತೆ ಪ್ರೌಢಶಾಲಾ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ ಏರ್ಪಡಿಸುವ ವಿಷಯ
ಪ್ರೌಢಶಾಲಾ ವಿಭಾಗ:
- 1. ಸ್ವಚ್ಛತೆಯ ಪಾಠ – ಗಾಂಧೀಜಿಯವರ ಸಂದೇಶ,
- 2. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ,
- 3. ಗಾಂಧೀಜಿಯವರ ಸ್ವಾತಂತ್ರ್ಯದ ಕನಸು – ನನ್ನ ಕಲ್ಪನೆ
ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗ:
- 1. ಅಸ್ಪøಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ
- 2. ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ
- 3. ಬದಲಾವಣೆ ನನ್ನಿಂದಲೇ ಆರಂಭ – ಗಾಂಧೀಜಿಯವರ ಪಾಠ
ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ:
- 1. ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ
- 2. ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ – ತತ್ವಗಳ ಹೋಲಿಕೆ
- 3.ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ – ಯುವಕರಿಗೆ ಗಾಂಧೀಜಿಯವರ ಪಾಠ
ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಜಿಲ್ಲಾ ಮಟ್ಟದಲ್ಲಿ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ರೂ.3000. ದ್ವಿತೀಯ ರೂ.2000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ.1000 ಗಳ ನಗದು ಬಹುಮಾನ ನೀಡಲಾಗುತ್ತದೆ. ಮತ್ತು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಪ್ರಬಂಧಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಕಳುಹಿಸಲಿದ್ದು ಇಲ್ಲಿ ಆಯ್ಕೆಯಾದವರಿಗೆ ಪ್ರಥಮ ರೂ.31000/- ದ್ವಿತೀಯ ರೂ.21000/- ಹಾಗೂ ತೃತೀಯ ಬಹುಮಾನವಾಗಿ ರೂ.11000/- ನಗದು ಬಹುಮಾನ ನೀಡಲಾಗುತ್ತದೆ.
Read also : ಎಸ್.ಎಸ್ ಕೇರ್ ಟ್ರಸ್ಟ್ ಆರೋಗ್ಯ ಸೇವೆಯಿಂದ ಜನರ ಜೀವನದಲ್ಲಿ ಆಶಾಕಿರಣ : ಸಂಸದೆ ಡಾ.ಪ್ರಭಾ
ಪ್ರಬಂಧ ಸ್ಪರ್ಧೆಯನ್ನು ಆಯಾ ಶಾಲಾ ಹಂತ ಮತ್ತು ಕಾಲೇಜು ಹಂತದಲ್ಲಿ ದಿನಾಂಕ:09-09-2025 ರೊಳಗಾಗಿ ಏರ್ಪಡಿಸಿ ಮೌಲ್ಯಮಾಪನ ಮಾಡಿ ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರ ಕಚೇರಿ ಮತ್ತು ಪದವಿ ಕಾಲೇಜುಗಳ ನೋಡಲ್ ಪ್ರಾಂಶುಪಾಲರ ಮೂಲಕ ವಿಜೇತರ ಪಟ್ಟಿಯೊಂದಿಗೆ ಪ್ರಬಂಧದ ಪ್ರತಿಗಳನ್ನು ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇವರಿಗೆ ಕಳುಹಿಸಿಕೊಡಲು ತಿಳಿಸಲಾಗಿದೆ.