ಜಗಳೂರು : ಪೂರ್ವಜರ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಿದ್ದು ಅನ್ನ, ವಿದ್ಯೆ,ಸಾರಿಗೆ, ಮೂಲ ಸೌಕರ್ಯಗಳಿರಲ್ಲಿ ನೆಮ್ಮದಿ,ಶಾಂತಿ,ಆರೋಗ್ಯ ಹೇರಳವಾಗಿತ್ತು.ಆದರೆ ಇಂದು ವಿದ್ಯೆ, ಸಂಪತ್ತು, ಅಧಿಕಾರ,ದವಸ ಧಾನ್ಯಗಳೆಲ್ಲವೂ ಹೇರಳವಾಗಿದ್ದರು ಸಹ ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣವಾಗುತ್ತಿದೆ ಎಂದು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ದಾವಣಗೆರೆ ಮುಖ್ಯ ರಸ್ತೆಯ ನಾಗರಕಟ್ಟೆ ಬಳಿ ಶ್ರೀ ನಾಗದೇವ, ವಿಘ್ನೇಶ್ವರ,ಶಿವ ಪಾರ್ವತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ಹಿಂದೆ ಸೌಕರ್ಯಗಳೆಲ್ಲದೆ ಇದ್ದರು ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ,ಇತ್ತೀಚಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಸಹ ಸಂಸ್ಕಾರಯುತ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಕಾರಣ ಮೌಲ್ಯಯುತ ಶಿಕ್ಷಣದ ಕೊರೆತೆ ಹಾಗಾಗಿ ಪೋಷಕರು ಮಕ್ಕಳಿಗೆ ಸಂಸ್ಕಾರತ ಶಿಕ್ಷಣವನ್ನು ಕೊಡಿಸುವಂತಹ ಕೆಲಸ ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದರು.
ಪ್ರಕೃತಿಯಲ್ಲಿ ಪಂಚತತ್ವಗಳು ಸಾರ್ವಕಾಲಿಕವಾಗಿ ಏಕಸ್ವರೂಪವಾಗಿದೆ.ಮನುಷ್ಯನ ಜೀವನ ಶೈಲಿ ಬದಲಾವಣೆಯಾಗಿದೆ.ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕಿದೆ.ವಿದ್ಯಾವಂತರು ಸಂಸ್ಕಾರ ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆ.ಮನುಷ್ಯನಿಗೆ ಪುಣ್ಯ ಮತ್ತು ಧರ್ಮ ಕಾರ್ಯಗಳಿಂದ ಮಾತ್ರ ಸುಖ,ನೆಮ್ಮದಿ ಸಿಗುತ್ತದೆ ಎಂದರು.
ಕೇದಾರ ಪೀಠದ ಉತ್ತರಾಧಿಕಾರಿಯಾದ ನಂತರ ಪ್ರಥಮ ಪ್ರವೇಶ ಇದಾಗಿದ್ದು ಅತ್ಯಂತ ಸಂತಸ ತಂದಿದೆ.ತಾಲ್ಲೂಕಿನಲ್ಲಿ ಗವಿಮಠದ ಪರಂಪರೆ ಉಳಿಸಲು ಭಕ್ತಸಮೂಹಕ್ಕೆ ಚಿರ ಋಣಿಯಾಗಿರುವೆ.ಪಟ್ಟಣದ ಅರಳಿಕಟ್ಟೆಯಲ್ಲಿ ನಾಗದೇವತೆ,ಶಿವಪಾರ್ವತಿ,ದೇವರುಗಳ ಪ್ರತಿಷ್ಠಾಪನೆಯ ಧಾರ್ಮಿಕ ಸತ್ಕಾರ್ಯಗಳು ಸ್ವಾಗತರ್ಹ ಎಂದರು.
Read also : ಮೆಕ್ಕೆಜೋಳ ಬೆಳೆಗೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ ರೈತರ ಕೂಗು
ಇದೇ ವೇಳೆ ಬೆಳಿಗ್ಗೆ ದೇವರುಗಳ ಪ್ರಾಣಪ್ರತಿಷ್ಠಾಪನೆ, ಭಕ್ತಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಾಗರಕಟ್ಟೆ ಸೇವಾಸಮಿತಿಯ ಅಧ್ಯಕ್ಷ ಚನ್ನಪ್ಪ,ಕಾರ್ಯದರ್ಶಿ ಗಣೇಶ್, ಕುಮಾರಗೌಡ್ರು, ದೊಣೆಹಳ್ಳಿ ಮಂಜುನಾಥ್, ಮನೋಹರ್ ರೆಡ್ಡಿ,ನಾಗರಾಜ್,ಗೌರಿಪುರ ಶಿವಣ್ಣ,ವಿಠ್ಠಲ್ ಶ್ರೇಷ್ಠಿ,ಪ.ಪಂ ಮಾಜಿ ಸದಸ್ಯೆ ಲಲಿತಮ್ಮಶಿವಣ್ಣ,ಬಂಗಾರಪ್ಪ,ವೆಂಕಟೇಶ್ ಮೂರ್ತಿ,ಪಂಕಜ,ಸೇರಿದಂತೆ ಮಹಿಳೆಯರು ಹಾಜರಿದ್ದರು.
ಜಗತ್ತಿನಲ್ಲಿ ನಂಬಿಕೆ,ವಿಶ್ವಾಸಗಳೆರಡನ್ನೂ ಗಳಿಸಬೇಕು, ಇತ್ತಿಚ್ಚಿನ ದಿನಮಾನಗಳಲ್ಲಿ ಕೌಟುಂಬಿಕ ಜೀವನದಲ್ಲಿನ ಗೊಂದಲಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ,ಮನಸ್ಸಿನಲ್ಲಿನ ವಿಷಯಗಳನ್ನು ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬೇಕು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮಿಗಳುಆಧುನಿಕ ಬದುಕಿನ ಒತ್ತಡಗಳಲ್ಲಿ ಮನುಷ್ಯನಿಗೆ ನೆಮ್ಮದಿಯಿಲ್ಲದಂತಾಗಿದೆ.ಕೌಟುಂಬಿಕ ಕೂಪದಲ್ಲಿನ ಸ್ವಾರ್ಥ ಬದುಕು,ಸಂಸಾರ,ಹಣಗಳಿಕೆ,ಅಧಿಕಾರ ಲಾಲಸೆಗಳಲ್ಲಿ ಮುಳುಗಿ ಹೋಗಿದ್ದಾರೆ.
ಎಂ.ಡಿ.ಕೀರ್ತಿಕುಮಾರ್
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
