ಹರಿಹರ (Harihara): ಹರಳಹಳ್ಳಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀ ಮಂಜಪ್ಪ ಎ.ಕೆ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ದ ಎ ಇ ಇ ಬಿ.ಕೆ ಗಿರೀಶ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಎಚ್.ಎಂ ಹನುಮಂತಪ್ಪ , ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಅನುಷಾ, ಕಾಂತಮ್ಮ, ರೂಪ, ದೇವಕಿ , ನಾಗಮ್ಮ, ಮೈತ್ರಮ್ಮ , ಚಂದ್ರಶೇಖರ ಚಾರಿ, ಸೋಮಶೇಖರಪ್ಪ, ಉಮೇಶ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್. ಪಿ ಬಿ ದೇವರಾಜ್ ಮತ್ತು ಪಿಡಿಒ ಶಾಂತಪ್ಪ ಹಾಗೂ ಹರಳಹಳ್ಳಿ, ಮಲ್ಲನಾಯಕನಹಳ್ಳಿ, ಗುಡದಹಳ್ಳಿ ಸಂಕ್ಲಿಪುರ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
Read also : ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ರಾಜೀನಾಮೆ ನೀಡಲಿ : ಕಾಂಗ್ರೆಸ್ ಆಗ್ರಹ