ಹರಿಹರ (Davanagere ): ಹರಿಹರ ನಗರಸಭೆಯ ಅಧ್ಯಕ್ಷೆರಾಗಿ ಜೆಡಿಎಸ್‌ನ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷರಾಗಿ ಎಂ ಜಂಬಣ್ಣ, ಆಯ್ಕೆಯಾಗಿದ್ದಾರೆ.
ಹರಿಹರ ನಗರ ಸಭೆಯ ಮೂರನೇ ಆಡಳಿತಾವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಸದಸ್ಯರುಗಳು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಕವಿತಾ ಮಾರುತಿ ಬೇಡರ್ ಹಾಗೂ ಉಪಾಧ್ಯಕ್ಷರಾಗಿ ಎಂ ಜಂಬಣ್ಣ, ಅವಿರೋಧವಾಗಿ ಆಯ್ಕೆಯಾದರು.
Read also : Political analysis | ಯತ್ನಾಳ್ ಬಗ್ಗುತ್ತಿಲ್ಲ ವಿಜಯೇಂದ್ರ ಬಿಡುತ್ತಿಲ್ಲ
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ವೇಳೆ ಹರಿಹರ ಶಾಸಕ ಬಿ.ಪಿ.ಹರೀಶ್, ವೀರೇಶ್ ಹನಗವಾಡಿ, ನಗರಸಭೆ ಮಾಜಿ ಅಧ್ಯಕ್ಷ ಶಂಕರ ಕಟಾವಕರ್ ಇತರರು ಇದ್ದರು.