ಹರಿಹರ (Harihara): ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹರಿಹರದ ಪ್ರೋ.ಬಿ.ಕೃಷ್ಣಪ್ಪ ನವರ ಸಮಾಧಿ ಸ್ಥಳದಿಂದ ಬೆಂಗಳೂರಿನವರೆಗೂ ಪಾದಾಯಾತ್ರೆಗೆ ಚಾಲನೆ ನೀಡಲಾಯಿತು.
ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎನ್ನುವ ಘೋಷಣೆಗಳೊಂದಿಗೆ ಪಾದಾಯಾತ್ರೆ ಆರಂಭವಾಯಿತು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಭಾಸ್ಕರ್ ಪ್ರಸಾದ್, ಚಿತ್ರನಟ ಚೇತನ್ ಅಹಿಂಸಾ, ಪ್ರೋ.ಹರಿರಾಮ್, ಪ್ರೋ.ಎ.ಬಿ. ರಾಮಚಂದ್ರಪ್ಪ, ನಿವೃತ್ತ ಎಸ್ಪಿ ರವಿ ನಾರಾಯಣ್, ಎಂ. ಸಿ.ಮೋಹನ್ ಕುಮಾರ್, ಎಲ್.ವಿ.ಸುರೇಶ್, ಹೆಗ್ಗೆರೆ ರಂಗಪ್ಪ, ಬಸವರಾಜ್ ಸಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ ಹನುಮಂತಪ್ಪ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಹನುಮಂತಪ್ಪ, ರಾಘವೇಂದ್ರ ಕಡೆಮನಿ, ಉಮೇಶ್ ರಾಣೆಬೆನ್ನೂರು, ಹೆಚ್.ಹುಲಿಗೇಶ, ಪಂಜು ಪೈಲ್ವಾನ್, ಎಸ್ ಕೇಶವ್ ಇನ್ನೂ ರಾಜ್ಯದ ಹಲವಾರು ಜನ ಮುಖಂಡರು ಭಾಗವಹಿಸಿದ್ದರು.
Read also : Davanagere | ರೈತರು ಬೆಳೆ ಸಮೀಕ್ಷೆ ಮಾಡುವಾಗ ನಿಖರ ಬೆಳೆ ನಮೂದಿಸಲು ಡಿಸಿ ಸಲಹೆ