ಹರಿಹರ (Davangere district ) : ಪೌರಕಾರ್ಮಿಕ ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಹರಿಹರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪೌರಕಾರ್ಮಿಕರನ್ನು ನೇಮಿಸಿ (Harihar Municipal Council)
ಕರುನಾಡ ಕದಂಬ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುಧಾಕರ್ ಮಾತನಾಡಿ, ನಗರದ ಜನಸಂಖ್ಯೆ ಅನುಗುಣವಾಗಿ ಕನಿಷ್ಠ 100 ನೂತನ ಪೌರಕಾರ್ಮಿಕವನ್ನು ನೇಮಿಸಬೇಕು ಅದನ್ನು ಏಜೆನ್ಸಿಗೆ ನೀಡದೆ ನೇರ ಹರಿಹರ ನಗರಸಭೆ (Harihar Municipal Council) ಯಿಂದ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನೀರಿನ ಅಭಾವ ನೀಗಿಸಿ (Harihar Municipal Council)
ತುಂಗಭದ್ರಾ ನದಿ (Tungabhadra river) ಮೈದುಂಬಿ ಹರಿಯುತ್ತಿದ್ದು, ನಗರದ ಮುಂದಿನ ಹಿತದೃಷ್ಟಿ ಶೇಖರಿಸಿ ನಗರದ ಜನತೆಗೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವವನ್ನು ಸರಿಪಡಿಸಬೇಕು. ನದಿಯ ಪಕ್ಕದಲ್ಲಿರುವ ಹರಿಹರ- ದಾವಣಗೆರೆ ನೀರಿನ ಘಟಕ ಸ್ಥಗಿತಗೊಂಡಿದ್ದು ಅದನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಬೇಸಿಗೆಯಲ್ಲಿ ನೀರಿನ ಅಭಾವ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಆಶ್ರಯ ಯೋಜನೆಯಡಿ ನಿವೇಶನ ನೀಡಿ (Harihar Municipal Council)
ನಗರಸಭೆ ವ್ಯಾಪ್ತಿಗೆ ಬರುವ ಆಶ್ರಯ ಕಾಲೋನಿಯ ಪಕ್ಕದಲ್ಲಿ 20 ಎಕರೆ ಹೆಚ್ಚು ಜಾಗವಿದ್ದು, ಆ ಜಾಗದಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಬೇಕು, ಕನ್ನಡ ಭವನ ನಿರ್ಮಾಣ ಮಾಡಬೇಕು, ಕೆ.ಎಚ್ ಬಿ ಕಾಲೋನಿ ಅನೇಕ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಇದರಿಂದ ಮಾರ್ಗದಿಂದ ಬರುವ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರು ತೊಂದರೆ ಅನುಭವಿಸುತ್ತಿದ್ದಾರೆ. ದ್ದಾರೆ. ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳಾಗಿವೆ ಅದನ್ನು ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Read also : DAVANGER NEWS : ಮರಾಠ ಸಮುದಾಯ : ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಶೀಘ್ರವೇ ತಾಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.