ದಾವಣಗೆರೆ : ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಕೆಟೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ದಿನೇಶ್ ಕುಮಾರ್, ದೀಪಕ್ ಕುಮಾರ್, ರಮೇಶ್ ಬಂಧಿತ ಆರೋಪಿಗಳು
ಕೆಬಿ ಬಡಾವಣೆಯ ಗಿರೀಶ್. ಹೆಚ್.ಎ., ಎಂಬ ವ್ಯಕ್ತಿಯು ಬೆಂಗಳೂರಿಗೆ ಹೋದಾಗ ಸಮಯದಲ್ಲಿ ಯಾರು ದುಷ್ಕ್ರರ್ಮಿಗಳು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಜುಲೈ 14 ರಂದು ಕೆಟೆಜೆ ನಗರ ಠಾಣೆಗೆ ಹಾಜರಾಗಿ ಸುಮಾರು 18 ಕೆ.ಜಿ.790 ಗ್ರಾಂ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ಸದರಿ ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಸದರಿ ಆರೋಪಿತರ ಬಳಿ ಇದ್ದ ಕೃತ್ಯಕ್ಕೆ ಬಳಸಿದ ಕಾರ್ ಮತ್ತು ಆಯುಧಗಳನ್ನು ಹಾಗೂ ಪಿರ್ಯಾದಿಯವರ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 20,00,000/- ರೂ ಬೆಲೆ ಬಾಳುವ 17 ಕೆ.ಜಿ.690 ಗ್ರಾಂ ಬೆಳ್ಳಿ ಸಾಮಾನುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ RJ-36 CB-2537 ನೇ ನಂಬರಿನ ಮಾರುತಿ ಸ್ವಿಪ್ಟ್ ಕಾರ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಕೆಟೆಜೆ ನಗರ ಪೊಲೀಸರು ಎಸ್ಪಿ ಉಮಾಪ್ರಶಾಂತ,ಎಎಸ್ಪಿಗಳಾದ ಪರಮೇಶ್ವರ ಹೆಗಡೆ ಮತ್ತು ಹೆಚ್ಚುವರಿ ಮಂಜುನಾಥ್. ಜಿ. ದಾವಣಗೆರೆ ನಗರ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೆÇಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡ ರಾಜಸ್ಥಾನದ ದಿನೇಶ್ ಕುಮಾರ್, ದೀಪಕ್ ಕುಮಾರ್, ರಮೇಶ್ ಬಂಧಿತ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಬಳಸಿದ ಕಾರ್ ಮತ್ತು ಆಯುಧಗಳನ್ನು ಹಾಗೂ ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 20,00,000/- ರೂ ಬೆಲೆ ಬಾಳುವ 17 ಕೆ.ಜಿ.690 ಗ್ರಾಂ ಬೆಳ್ಳಿ ಸಾಮಾನುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಖಎ-36 ಅಃ-2537 ನೇ ನಂಬರಿನ ಮಾರುತಿ ಸ್ವಿಪ್ಟ್ ಕಾರ್ ವಶಪಡಿಸಿಕೊಂಡಿದ್ದಾರೆ.
Read also : ಹಳೇಬಾತಿಗೆ ನಗರಸಾರಿಗೆ ಬಸ್ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸ್ಪಂದನೆಗೆ ಗ್ರಾಮಸ್ಥರ ಸಂತಸ
ಎ1 ಆರೋಪಿ ದಿನೇಶ್ ಕುಮಾರ್ ವಿರುದ್ದ ಗುಜರಾತ್ ರಾಜ್ಯದ ವಲ್ ಸಾಡ್ ಜಿಲ್ಲೆಯ ವಲ್ ಸಾಡ್ ನಗರ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ದಿನಾಂಕ:25-10- 2024 ಶಿಕ್ಷೆಯಾಗಿದೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್., ಪಿ.ಎಸ್.ಐ ಲತಾ.ಆರ್ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಸಂಗಮೇಶ್, ಶ್ರೀಮತಿ ಗೌರಮ್ಮ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾದವ್, ಸಿದ್ದಾರ್ಥ್, ರಮೇಶ್ ಹಾಗೂ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‍ನ ಸಿಬ್ಬಂದಿಯವರಾದ ಮಾರುತಿ, ಸೋಮಪ್ಪ ಮತ್ತು ಪ್ರಶಾಂತ್ ರವರುಗಳನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.