ದಾವಣಗೆರೆ : ಮನೆ ಕಳ್ಳತನ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಅಂತರ್ ಜಿಲ್ಲಾ ಆರೋಪಿತರನ್ನು ಜಗಳೂರು ಟೌನ್ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ್ಳ ಜಿಲ್ಲೆಯ ಗಂಗಾವತಿ ಹನೀಫ್, ಗೌಸ್, ಸುಹೇಲ್ ಬಂಧಿಸಲಾಗಿದೆ. ಆರೋಪಿಗಳಿಂದ ಕಳವು ಮಾಡಿದ 1500 ಗ್ರಾಂ ನ ಬೆಳ್ಳಿಯ ಸಾಮಾನುಗಳು ಅಂದಾಜು ಬೆಲೆ- 1,85,000 ಮತ್ತು ಕೃತ್ಯಕ್ಕೆ ಬಳಸಿದ ಸುಜುಕಿ ಕಂಪನಿಯ ಸ್ಕೂಟಿ ಅಂದಾಜು ಬೆಲೆ 1,15,000/-, ಕೃತ್ಯಕ್ಕೆ ಬಳಸಿದ 01 ಕಬ್ಬಿಣದ ರಾಡು ಅನ್ನು ವಶಪಡಿಸಿಕೊಂಡಿದ್ದಾರೆ.
ಜಗಳೂರಿನ ಹೊರಕೆರೆ ವಾಸಿ ಉಮಾಶಂಕರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ಠಾಣೆಯ ನಿರೀಕ್ಷಕ ಸಿದ್ರಾಮಯ್ಯ ನೇತೃತ್ವದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರ ಮೇಲೆ ಮುನಿರಬಾದ್ ನಲ್ಲಿ ಹೆದ್ದಾರಿಯಲ್ಲಿ ದರೋಡೆ ಪ್ರಕರಣ, ಕುಷ್ಟಗಿಯಲ್ಲಿ, ಗಂಗಾವತಿ ಟೌನ್ & ಗಂಗಾವತಿ ಗ್ರಾಮಾಂತರ, ಕೊಪ್ಪಳ ಗ್ರಾಮಾಂತರ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 07 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
Read also : ದಾವಣಗೆರೆ | ಸೈಬರ್ ವಂಚನೆಗಳಿಂದ ಗ್ರಾಹಕರು ಎಚ್ಚರ ವಹಿಸಿ
ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ ಹಾಗೂ ಪಿ.ಎಸ್.ಐ. ಗಾದಿಲಿಂಗಪ್ಪ, ಶರಣಬಸಪ್ಪ, ಆಶಾ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ವೆಂಕಟೇಶ, ಎ.ಎಸ್.ಐ. ನಟರಾಜ್ ಹಾಗೂ ನಾಗಭೂಷಣ್, ನಾಗರಾಜಯ್ಯ, ಮಾರಪ್ಪ, ಯಶವಂತ್, ಚೈತ್ರಾ, ಕರಿಬಸವರಾಜ, ಜಿಲ್ಲಾ ಪೊಲೀಸ್ ಕಛೇರಿಯ ಪಿ.ಎಸ್.ಐ. ಮಂಜುನಾಥ ಕಲ್ಲೇದೇವರ, ಎ.ಎಸ್.ಐ. ರಾಜು ನಾಗ, ರಾಮಚಂದ್ರ ಬಿ ಜಾಧವ್,ನಾಗರಾಜ್ ಕುಂಭಾರ, ಹೆಚ್.ಸಿ. ಅಖ್ತರ್, ಪಿಸಿ ವಿರೇಶ, ರಮೇಶ ರವರನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.