ದಾವಣಗೆರೆ (Davanagere) : ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಆರ್‌ಎಂಸಿ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಒರಿಸ್ಸಾ ರಾಜ್ಯದ ಸಂಬಲ್ ಪುರ ಜಿಲ್ಲೆಯ ಅತಾವೀರ ಗ್ರಾಮದ ನಂದಿನಿ ಸಿಂಗ್, ರುಬೀ ಜಾನಿ ಬಂಧಿತ ಆರೋಪಿಗಳು. ಬಂಧಿತರಿಂದ 4,29,000/-ರೂ ಬೆಲೆ ಬಾಳುವ 57 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 535 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 91,000/- ರೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆರ್‌ಎಂಸಿ ಠಾಣಾ ವ್ಯಾಪ್ತಿಯ ಕೊಟ್ರೇಶ್ ಚಾರಿ ಎಂಬುವವರು ಮನೆಯಲ್ಲಿ ಕಳ್ಳತನವಾಗಿರುವ ಕುರಿತು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಆರ್‌ಎಂಸಿ ಠಾಣೆಯ ಪೊಲೀಸರು ಎಎಸ್ಪಿಗಳಾದ ವಿಜಯ್ ಕುಮಾರ್ ಎಂ ಸಂತೋಷ್ , ಮಂಜುನಾಥ ಜಿ, ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ, ಗಾಂಧಿ ನಗರ ವೃತ್ತದ ಪೊಲೀಸ್ ನಿರೀಕ್ಷಕ ಬಾಲಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಆರ್,ಎಂ,ಸಿ ಯಾರ್ಡ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಚೀನ್ ಬಿರಾದಾರ್, ಪುಷ್ಪಲತಾ ಪಿ.ಎಸ್.ಐ (ತನಿಖೆ) ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
Read also : ಸಿಎಂ ಸಿದ್ದರಾಮಯ್ಯ ಅವರಿಂದ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ
ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಪಿ.ಎಸ್.ಐ, ಸಚೀನ್ ಬಿರಾದಾರ್, ಪಿ.ಎಸ್.ಐ ಶ್ರೀಮತಿ ಪುಷ್ಪಲತಾ ಮತ್ತು ಸಿಬ್ಬಂದಿಗಳಾದ ಮಂಜುನಾಥ ಆರ್, ಸೈಯಾದ್ ಅಲಿ, ಮಂಜುನಾಥ ಜೆ,ಎಮ್, ಕರಿಬಸಪ್ಪ, ಕವಿತಾ ಪೂರದ್, ಶಾಹಿನಾ ಬಾನು ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.